ಉದಯವಾಹಿನಿ, ಮಧ್ಯಪ್ರದೇಶ: ಪಾಂಗ್ರಿ ಅಣೆಕಟ್ಟು ಯೋಜನೆಯ ಪರಿಣಾಮ ಭೂಮಿ ಕಳೆದುಕೊಂಡ ರೈತರು ತಮಗೆ ಸರಿಯಾದ ಪರಿಹಾರ ಸಿಕ್ಕಿಲ್ಲ ಎಂದು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸೊಂಟಕ್ಕೆ ಬಾಳೆ ಎಲೆ ಕಟ್ಟಿ, ತಲೆಗೆ ತೇಗದ ಎಲೆಯ ಕಿರೀಟ ಧರಿಸಿದ ರೈತರು ಭೂ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿದರು. 2013ರ ಭೂ ಕಾನೂನು ಗ್ರಾಮೀಣ ಭೂಸ್ವಾಧೀನಕ್ಕೆ ಹೆಚ್ಚಿನ ಪರಿಹಾರ ಮತ್ತು ಪುನರ್ವಸತಿಯ ಖಾತರಿ ನೀಡುತ್ತದೆ. ಆದರೆ ಇಲ್ಲಿನ ಪ್ರಕರಣದಲ್ಲಿ ಅದನ್ನು ಪಾಲಿಸಲಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುರ್ಹಾನ್‌ಪುರ ಜಿಲ್ಲೆಯಲ್ಲಿ ಪಾಂಗ್ರಿ ಅಣೆಕಟ್ಟು ಯೋಜನೆಯಿಂದಾಗಿ ಸಂತ್ರಸ್ತರಾಗಿರುವ ಮಧ್ಯಪ್ರದೇಶದ ರೈತರು ಸೊಂಟಕ್ಕೆ ಬಾಳೆ ಎಲೆ ಮತ್ತು ತಲೆಗೆ ತೇಗದ ಎಲೆಗಳನ್ನು ಕಟ್ಟಿಕೊಂಡು ಘೋಷಣೆಗಳನ್ನು ಕೂಗುತ್ತಾ ಪರಿಹಾರಕ್ಕಾಗಿ ಆಗ್ರಹಿಸಿದರು.
