ಉದಯವಾಹಿನಿ, ಬಿಗ್‌ಬಾಸ್ ಕನ್ನಡ ಸೀಸನ್ (BBK 12) 12 ಮುಕ್ತಾಯ ಹಂತಕ್ಕೆ ಬಂದು ನಿಂತಿದೆ. ಸ್ಪರ್ಧಿಗಳಿಂದ ತುಂಬಿದ್ದ ದೊಡ್ಮನೆ ಈಗ ಖಾಲಿಯಾಗುತ್ತಿದೆ. ಸದ್ಯಕ್ಕೀಗ 8 ಸ್ಪರ್ಧಿಗಳು ಮನೆಯಲ್ಲಿದ್ದಾರೆ. ಫಿನಾಲೆಗೆ ಇನ್ನೊಂದೇ ವಾರ ಬಾಕಿಯಿದೆ. ಅಷ್ಟರಲ್ಲಿ ಇನ್ನಿಬ್ಬರು ಸ್ಪರ್ಧಿಗಳು ಮನೆಯಿಂದ ಆಚೆ ಹೋಗುತ್ತಾರೆ. ಅಲ್ಲಿಗೆ ಕೇವಲ ಆರು ಸ್ಪರ್ಧಿಗಳು ಮಾತ್ರ ಮನೆಯಲ್ಲಿ ಉಳಿಯುತ್ತಾರೆ. ಹೀಗಾಗಿ ಮನೆ ಖಾಲಿಯಾಗುತ್ತಿರುವ ಕುರಿತು ಸ್ಪರ್ಧಿ ಅಶ್ವಿನಿ ಗೌಡ ಸಹಸ್ಪರ್ಧಿ ಧ್ರುವಂತ್ ಜೊತೆ ಮಾತನಾಡುತ್ತಾ ಆತಂಕ ವ್ಯಕ್ತಪಡಿಸಿದ್ರು. ಈ ವೇಳೆ ಧ್ರುವಂತ್ ಬಿಕ್ಕಿ ಬಿಕ್ಕಿ ಅಳುವ ನಾಟಕ ಮಾಡಿದ್ದಾರೆ.
ಬೇರೆಯವರನ್ನ ಇಮಿಟೇಟ್ ಮಾಡೋದ್ರಲ್ಲಿ ಧ್ರುವಂತ್ ಎತ್ತಿದ ಕೈ, ಹೀಗಾಗಿ ಇದೀಗ ಇಬ್ಬರು ಮನೆಯಿಂದ ಹೊರಟು ಹೋಗ್ತಾರೆ ಎಂದು ಅಶ್ವಿನಿ ಹೇಳಿದ್ದಕ್ಕೆ ಧ್ರುವಂತ್ ಸುಮ್ಮನೆ ಅಳುವ ನಾಟವಾಡಿದ್ದಾರೆ. ಅತ್ತು ಅತ್ತು ಕಣ್ಣೀರೇ ಬರುತ್ತಿಲ್ಲ ಎಂದು ನಾಟಕ ಮಾಡಿದ್ದಾರೆ. ಹೀಗಾಗಿ ಧ್ರುವಂತ್ ಯಾರನ್ನ ಇಮಿಟೇಟ್ ಮಾಡಿದ್ರು ಅನ್ನೋದ್ರ ಕುರಿತು ಚರ್ಚೆ ಜೋರಾಗಿದೆ.
ರಕ್ಷಿತಾರನ್ನ ಇಮಿಟೇಟ್ ಮಾಡಿರಬಹುದೇ ಎಂಬ ಅನುಮಾನವನ್ನ ಹಲವರು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ 6 ಸ್ಪರ್ಧಿಗಳು ಲಿವಿಂಗ್ ಏರಿಯಾದಲ್ಲಿದ್ರೆ ಧ್ರುವಂತ್ ಹಾಗೂ ಅಶ್ವಿನಿ ಗೌಡ ಬೆಡ್‌ ರೂಂನಲ್ಲಿ ಕುಳಿತು ಮಾತನಾಡಿದ್ರು. ಹೀಗೆ ಮನೆಯಲ್ಲಿದ್ದ ಜನರು ವಾರದಿಂದ ವಾರಕ್ಕೆ ಕಮ್ಮಿಯಾಗುತ್ತಿರುವ ವಿಚಾರಕ್ಕೆ ಅಶ್ವಿನಿ ಗೌಡ ಗಂಭೀರವಾಗೇ ಕಳವಳ ವ್ಯಕ್ತಪಡಿಸುತ್ತಿದ್ದರೆ ಧ್ರುವಂತ್ ಬೇರೆಯವರನ್ನ ಇಮಿಟೇಟ್ ಮಾಡುವಂತೆ ಅಳುವ ನಾಟಕ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!