ಉದಯವಾಹಿನಿ, ಶಿವಮೊಗ್ಗ: ಜಾನುವಾರು ಮೇಯಿಸುತ್ತಿದ್ದ ಮಹಿಳಯೋರ್ವರ ಮಾಂಗಲ್ಯ ಸರ ಅಪಹರಿಸಿಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು, ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆ ನಿವಾಸಿ ಹೇಮಂತ್ ಯಾನೆ ಸತೀಶ್ (32) ಹಾಗೂಹಾಲಪ್ಪ ಸರ್ಕಲ್ ಸಮೀಪದ ನಿವಾಸಿ ಜೀವನ್ ಯಾನೆ ದಮ್ಮು (23) ಬಂಧಿತ ಆರೋಪಿಗಳೆಂದುಗುರುತಿಸಲಾಗಿದೆ. ಅರದೋಟ್ಲು ಗ್ರಾಮದ ಬಸ್ ನಿಲ್ದಾಣದ ಬಳಿ, ಜಾನುವಾರು ಮೇಯಿಸುತ್ತಿದ್ದಮಹಿಳೆಯ ಮಾಂಗಲ್ಯ ಸರ ಅಪಹರಿಸಿ ಸದರಿ ಆರೋಪಿಗಳಿಬ್ಬರು ಪರಾರಿಯಾಗಿದ್ದರು. ಈ ಸಂಬಂಧಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಜು. 21 ರಂದು ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸು
ವಲ್ಲಿ ಯಶಸ್ವಿಯಾಗಿದ್ದಾರೆ.ವಿಚಾರಣೆ ವೇಳೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ,ಬೈಕ್ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.ಬಂಧಿತರಿಂದ ಎರಡು ಕಳವು ಪ್ರಕರಣಗಳಿಗೆ ಸಂಬಂಧಿಸಿದದಂತೆ 75 ಸಾವಿರ ರೂ. ಮೌಲ್ಯದ 23ಗ್ರಾಂ ಬಂಗಾರದ ಮಾಂಗಲ್ಯ ಸರ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ 1ಲಕ್ಷ ರೂ.ಗಳಾಗಿದೆ ಎಂದು ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ
ನೀಡಿದೆ.ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಜಿತೇಂದ್ರದಯಾಮ ಮಾರ್ಗದರ್ಶನದಲ್ಲಿ ಹೊಳೆಹೊನ್ನೂರು ಠಾಣೆ ಇನ್ಸ್’ಪೆಕ್ಟರ್ ಲಕ್ಷ್ಮೀಪತಿ, ಸಬ್ಇನ್ಸ್’ಪೆಕ್ಟರ್ ಗಳಾದ ಸುರೇಶ್, ರಮೇಶ್, ಸಿಬ್ಬಂದಿಗಳಾದ ಹೆಚ್.ಸಿ. ಲಿಂಗೇಗೌಡ,ಮಂಜುನಾಥ್, ಪಿಸಿಗಳಾದ ವಿಶ್ವನಾಥ್, ಚಂದ್ರಶೇಖರ್, ಪೇಪರ್ ಟೌನ್ ಠಾಣೆ ಹೆಚ್.ಸಿ. ನಾಗರಾಜ್, ಶಿವಮೊಗ್ಗ ಎಸ್ಪಿ ಕಚೇರಿ ಎ.ಎನ್.ಸಿ. ವಿಭಾಗದ ಸಿಬ್ಬಂದಿಗಳಾದ ಇಂದ್ರೇಶ್,ಗುರುರಾಜ್, ವಿಜಯಕುಮಾರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
