ಉಯವಾಹಿನಿ, ಬೆಂಗಳೂರು: ಯಾರು ಡ್ಯಾಡಿ? ಡ್ಯಾಡಿ ಈಸ್ ಹೋಮ್ ಅಂದ್ರೆ ಏನು? ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.ಬೆಂಗಳೂರಲ್ಲಿ ಡಿಕೆ ರಾಜ್ಯ ರಾಜಕಾರಣಕ್ಕೆ ರೀ-ಎಂಟ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ಡ್ಯಾಡಿ? ಡ್ಯಾಡಿ ಈಸ್ ಹೋಮ್ ಅಂದ್ರೆ ಏನು? ಎಂದು ವ್ಯಂಗ್ಯವಾಡಿದ್ದಾರೆ. ಅವರು ಮೊದಲು ರಾಜೀನಾಮೆ ಕೊಡಲಿ. ರಾಜೀನಾಮೆ ಕೊಟ್ಟ ಮೇಲೆ ಮಾತು ಕೊಟ್ಟು ರಾಜ್ಯಕ್ಕೆ ಬರಲಿ. ಅವರನ್ನ ಏಕೆ ರಾಜ್ಯಕ್ಕೆ ಕರೆದುಕೊಂಡು ಬರ್ತಾ ಇದೀರಾ? ಈಗ ದೇಶದಲ್ಲಿ ಇದ್ದಾರೆ, ದೇಶಸೇವೆ ಮಾಡಲಿ ಎಂದು ಟಕ್ಕರ್ ಕೊಟ್ಟಿದ್ದಾರೆ.
ಜೆಡಿಎಸ್‌ನವರಿಗೆ ಕೆಲಸ ಇಲ್ಲ, ಸಿಡಿ ಫ್ಯಾಕ್ಟರಿ ಇದ್ದಿದ್ದು ಹೊಳೆನರಸೀಪುರದಲ್ಲಿ, ಪದ್ಮನಾಭ ನಗರದಲ್ಲಿ. ಆ ಫ್ಯಾಕ್ಟರಿಯಲ್ಲಿ ಯಾರು ಮ್ಯಾನಿಫ್ಯಾಕ್ಚರ್ ಮಾಡ್ತಿದ್ದು? ಕುಮಾರಸ್ವಾಮಿ ಇದನ್ನೆಲ್ಲಾ ಬಿಡಿ. ದಯವಿಟ್ಟು ಹೆಚ್‌ಎಂಟಿಯವರಿಗೆ ನ್ಯಾಯ ಕೊಡಿಸಿ. ಸುಮ್ಮನೆ ಇಲ್ಲದೇ ಇರೋದನ್ನ ಯಾಕ್ ಹೇಳ್ತೀರಿ. ಮಂಡ್ಯದಲ್ಲಿ ಗಣಿಗ ರವಿ ಸರ್ಕಾರದ ಜಾಗ ಗುರುತಿಸಿದ್ದಾರೆ. ನಿಮ್ಮ ಇಲಾಖೆಯಿಂದ ಏನ್ ಮಾಡಿದ್ದೀರಿ ಹೇಳಿ. ಉದ್ಯೋಗ ಕೊಡಿಸೋದನ್ನ ನೋಡಿ ಅಂತಾ ಟಾಂಗ್ ಕೊಟ್ಟಿದ್ದಾರೆ.
