ಉಯವಾಹಿನಿ, ಬೆಂಗಳೂರು: ಬಸವರಾಜ ರಾಯರೆಡ್ಡಿ ಹೈಕಮಾಂಡಾ? 2028ರ ತನಕ ಸಿದ್ದರಾಮಯ್ಯ ಸಿಎಂ ಅಂತ ಹೇಳಲು ರಾಯರೆಡ್ಡಿ ಯಾರು? ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ಕಿಡಿಕಾರಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು ಹೈಕಮಾಂಡ್ ಏನಾದ್ರೂ ಹೇಳಿದ್ಯಾ ಅವರಿಗೆ? ಹಿರಿಯರೇ ಹೀಗೆ ಮಾತಾಡಿದ್ರೆ ಹೇಗೆ? ನಾನಾದ್ರೆ ಮೊದಲ ಸಲ ಗೆದ್ದವನು, ಮಾತಾಡಿದ್ರೆ ನಡೆಯುತ್ತೆ. ಹೈಕಮಾಂಡ್ ಹೇಳಿದ್ಮೇಲೆ ನಾವು ಸೈಲೆಂಟ್ ಆಗಿದ್ದೇವೆ. ಇವರು ಮಾತಾಡಿದ್ರೆ ಹೇಗೆ ಎಂದು ಪ್ರಶ್ನಿಸಿದರು.
ಬಜೆಟ್ ಇರೋದು ಮಾರ್ಚ್‌ಗೆ, ಈಗಲೇ ಸಿದ್ಧತೆ ಮಾಡಿಕೊಳ್ಳಬೇಕಿಲ್ಲ. ಸಂಕ್ರಾಂತಿ ನಂತರ ಮಾತನಾಡುತ್ತೇನೆ. ಸಿದ್ದರಾಮಯ್ಯ ಅವರೇ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂದ್ಮೇಲೆ ನಮ್ದು, ನಿಮ್ದು ಏನು? ರಾಯರೆಡ್ಡಿ ಹೇಳಿಕೆ ಪರಿಗಣಿಸೋದು ಬೇಡ. ಹೈಕಮಾಂಡ್ ಇದನ್ನ ಗಮನಿಸಬೇಕಾಗಿದೆ. ಇದು ಪಾರ್ಟಿಗೆ ಒಳ್ಳೆಯದಲ್ಲ. ಪ್ರತಿಯೊಬ್ಬ ಶಾಸಕರಿಗೂ ಅವರದ್ದೇ ಆದ ಗೌರವ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಬ್ಬರಿಗೊಂದು ನೊಟೀಸ್ ಕೊಡೋದು ಮತ್ತೆ ಇನ್ಯಾರಿಗೋ ಕೊಡಲ್ಲ ಅನ್ನೋದು ಸರಿಯಲ್ಲ. ಸಂಕ್ರಾಂತಿ ಬಳಿಕ ನಾನು ಮಾತನಾಡುತ್ತೇನೆ, ಜನವರಿ 16ರ ಬಳಿಕ ನಾವು ಮಾತನಾಡುತ್ತೇನೆ. ರಾಜಣ್ಣ ಅವರು ಎರಡೆರೆಡು ಸ್ಟೇಟ್ಮೆಂಟ್ ಮಾಡಿದ್ದಾರೆ. ನುಡಿದಂತೆ ನಡೆಯಬೇಕು ಅಂತಲೂ ಹೇಳಿದ್ದಾರೆ. ರಾಯರೆಡ್ಡಿ, ರಾಜಣ್ಣ ನಾನು ಯಾರೂ ಹೈಕಮಾಂಡ್ ಅಲ್ಲ ಎಂದು ಅಸಮಾಧಾನ ಹೊರಹಾಕಿದರು.
