ಉಯವಾಹಿನಿ, ರಾಮನಗರ: ನಾಡಬಾಂಬ್ ಸ್ಫೋಟಗೊಂಡು ಹಸುವಿನ (Cow) ಬಾಯಿ ಛಿದ್ರಗೊಂಡ ಪ್ರಕರಣ ಸಂಬಂಧ ಕಾಡುಹಂದಿ ಬೇಟೆಗಾಗಿ ನಾಡಬಾಂಬ್ ಇಟ್ಟಿದ್ದ ಮೂವರು ಆರೋಪಿಗಳನ್ನ ಬಂಧನ ಮಾಡಲಾಗಿದೆ.
ಕೃಷ್ಣಮೂರ್ತಿ (45), ಶಿವಕುಮಾರ್ (23), ಶಿವನಪ್ಪ (46) ಬಂಧಿತ ಆರೋಪಿಗಳು. ಕನಕಪುರ ತಾಲೂಕಿನ ಆಲನಾಥ ಗ್ರಾಮದ ಬಳಿ ಜ.3ರಂದು ಈ ಘಟನೆ ನಡೆದಿತ್ತು. ರೈತ ಶಿವನೇಗೌಡ ಎಂಬುವವರು ಹಸುವನ್ನ ಮೇಯಲು ಬಿಟ್ಟಿದ್ದಾಗ ಬಾಯಿಗೆ ನಾಡಬಾಂಬ್ ಸಿಲುಕಿ ಸ್ಫೋಟಗೊಂಡು, ಹಸು ಬಾಯಿ ಛಿದ್ರಛಿದ್ರವಾಗಿತ್ತು. ಕಿಡಿಗೇಡಿಗಳ ಕೃತ್ಯಕ್ಕೆ ಹಸು ನರಳಾಡಿ ಎರಡು ದಿನಗಳ ಬಳಿಕ ಸಾವನ್ನಪ್ಪಿತ್ತು. ಈ ಸಂಬಂಧ ರೈತ ಶಿವನೇಗೌಡ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಕೋಡಿಹಳ್ಳಿ ಪೊಲೀಸರು, ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಟ್ಟಿದ್ದ ಮೂವರ ಬಂಧಿಸಿ, ಎರಡು ಜೀವಂತ ನಾಡಬಾಂಬ್‌ಗಳನ್ನ ವಶಕ್ಕೆ ಪಡೆದಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
