ಉಯವಾಹಿನಿ, ಟೆಹ್ರಾನ್: ಇರಾನಿನ ಯುವತಿಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಜಿಮ್ನಾಸ್ಟಿಕ್ಸ್ (Gymnastics) ಪ್ರದರ್ಶಿಸುತ್ತಿರುವ ವಿಡಿಯೊ ವೈರಲ್ ಆಗಿದ್ದು , ಈ ಘಟನೆ ಇರಾನ್‌ನ ಕಟ್ಟುನಿಟ್ಟಾದ ನೈತಿಕ ಕಾನೂನುಗಳಿಗೆ ದಿಟ್ಟ ಸವಾಲಾಗಿ ಕಂಡುಬರುತ್ತದೆ. ಮಹಿಳೆಯರ ದೇಹ ಮತ್ತು ಚಲನೆಗಳನ್ನು ಹೆಚ್ಚು ನಿಯಂತ್ರಿಸುವ ದೇಶದಲ್ಲಿ, ಈ ಪ್ರದರ್ಶನವು ಧಿಕ್ಕಾರ, ಆಕರ್ಷಕ, ನಿರ್ಭೀತದ ಸ್ಪಷ್ಟ ಸೂಚನೆಯಾಗಿ ಎದ್ದು ಕಾಣುತ್ತದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವಿಡಿಯೊ, ಯುವತಿಯು ಸಾರ್ವಜನಿಕವಾಗಿ ಆತ್ಮವಿಶ್ವಾಸದಿಂದ ಜಿಮ್ನಾಸ್ಟಿಕ್ ಪ್ರದರ್ಶಿಸುತ್ತಿರುವುದನ್ನು ತೋರಿಸುತ್ತದೆ. ಇದು ಎಲ್ಲಿ ಮಾತ್ತು ಯಾವಾಗ ನಡೆಯುತು ಎಂಬ ಬಗ್ಗೆ ಸ್ಪಷ್ಟವಾಗಿಲ್ಲದಿದ್ದರೂ, ವಿಡಿಯೊ ಮಾತ್ರ ನೆಟ್ಟಿಗರ ಗಮನಸೆಳೆದಿದೆ.

ಜಿಮ್ನಾಸ್ಟಿಕ್ ಪ್ರದರ್ಶನದ ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶ್ಲಾಘಿಸಲಾಗಿದೆ. ನೆಟ್ಟಿಗರು ಇದನ್ನು ಪ್ರತಿರೋಧ ಮತ್ತು ಸ್ವಾತಂತ್ರ್ಯದ ಪ್ರಬಲ ಸಂಕೇತ ಎಂದು ಕರೆದಿದ್ದಾರೆ. ಈ ರೀತಿಯ ಪ್ರದರ್ಶನಗಳು ಸ್ವಾತಂತ್ರ್ಯದ ಚೈತನ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ತೋರಿಸುತ್ತದೆ. ಬದಲಾವಣೆಯು ಧೈರ್ಯದಿಂದ ಪ್ರಾರಂಭವಾಗುತ್ತದೆ ಎಂದು ಎಕ್ಸ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಬಹುತೇಕ ಬಳಕೆದಾರರು, ಆ ಯುವತಿಯನ್ನು ಧೈರ್ಯಶಾಲಿ ಮತ್ತು ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದಾರೆ ಎಂದು ಕರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!