ಉಯವಾಹಿನಿ, ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ರೆ ಈಗ ಕೆಲವೇ ನಿಮಿಷಗಳಲ್ಲಿ, ಗಂಟೆಗಳಲ್ಲಿ ಮನೆಗೆ ಬರುತ್ತವೆ. ಕೆಲವು ವರ್ಷಗಳ ಹಿಂದೆ ಹೀಗೆ ಆರ್ಡರ್ ಮಾಡಿದ್ದ ವಸ್ತುಗಳು ಕೆಲವೊಮ್ಮೆ ಬೇರೆಯವರ ಮನೆಗೆ ತಲುಪುತ್ತಿದ್ದವು. ಇಲ್ಲದಿದ್ರೆ ಈಗ ಮಾಡಿದ ಆರ್ಡರ್ ಮತ್ಯಾವಾಗೋ ಬರುತ್ತಿದ್ದವು. ಇಲ್ಲೊಂದು ಇಂತಹದ್ದು ವಿಚಿತ್ರವಾದ ಸಂಗತಿಯೊಂದು ನಡೆದಿದ್ದು ಮೊಬೈಲ್‌ಗಳನ್ನು ಆರ್ಡರ್ ಮಾಡಿದ್ದು ಯಾವಾಗೋ, ಬಂದಿದ್ದು ಇನ್ಯಾವಾಗೋ?. ಲಿಬಿಯಾದಲ್ಲಿ ಮೊಬೈಲ್ ಅಂಗಡಿ ಮಾಲೀಕರೊಬ್ಬರು 2010ರಲ್ಲಿ ಮೊಬೈಲ್‌ಗಳನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದರು. ಆದರೆ ದೇಶದಲ್ಲಿ ಅಂತರ್ಯುದ್ಧಗಳು ಭುಗಿಲೆದ್ದ ಕಾರಣ ಹಲವಾರು ವರ್ಷಗಳ ಕಾಲ ಪರಿಸ್ಥಿತಿ ಹದಗೆಟ್ಟಿದ್ದವು. ಸಾರಿಗೆ ವ್ಯವಸ್ಥೆ, ದೇಶ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳೆಲ್ಲಾ ಹದಗೆಟ್ಟು ಹೋಗಿದ್ದವು. ಇಂತಹ ಸ್ಥಿತಿಯಲ್ಲಿ ಮೊಬೈಲ್‌ಗಳನ್ನು ಆರ್ಡರ್ ಮಾಡಿದ್ದ ಮಾಲೀಕ ಎಲ್ಲವನ್ನು ಮರೆತ್ತಿದ್ದರು.
ತಾವು ಆರ್ಡರ್ ಮಾಡಿದ್ದ ಮೊಬೈಲ್‌ಗಳ ಬಗ್ಗೆ ಅವರಿಗೆ ನೆನಪೇ ಇರಲಿಲ್ಲ. ಒಂದಲ್ಲ ಅಥವಾ ಒಂದು ದಿನ ಅವು ಬರುತ್ತವೆ ಎಂದು ಕನಸು ಕೂಡ ಕಂಡಿರಲಿಲ್ಲ. ಆದರೆ 2010 ರಲ್ಲಿ ಅರ್ಡರ್ ಮಾಡಿದ್ದ ನೋಕಿಯಾ ಬಟನ್ ಮೊಬೈಲ್‌ಗಳು 2026ರಲ್ಲಿ ಅವರ ಅಂಗಡಿಗೆ ಬಂದಿವೆಯಂತೆ. ಪಾರ್ಸಲ್ ಬಾಕ್ಸ್ ಏನು ಬಂದಿದೆ ಎಂದು ಮಾಲೀಕ ಓಪನ್ ಮಾಡಿ ನೋಡಿದಾಗ ಅದರಲ್ಲಿ ಆಗಿನ ಸಮಯದಲ್ಲಿದ್ದ ನೋಕಿಯಾ ಬಟನ್ ಫೋನ್‌ಗಳು ಬಂದಿದ್ದು ನೋಡಿ ಫುಲ್ ನಗಾಡಿದ್ದಾರೆ. ಇವು ಏನು ಮೊಬೈಲ್‌ಗಳಾ ಅಥವಾ ಯಾವುದಾದರೂ ಹಳೆಯ ಕಾಲದ ವಸ್ತುಗಳ ಎಂದು ಓನರ್ ತಮಾಷೆಯಾಗಿ ಹೇಳಿದ್ದಾನೆ. ಸದ್ಯ ಈ ಸಂಬಂಧ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈಗ ಏನಿದ್ದರೂ ಟಚ್ ಸ್ಕ್ರೀನ್ ಮೊಬೈಲ್‌ಗಳು. ಇತ್ತೀಚಿಗೆ ಜನಿಸಿದವರಿಗೆ ಈ ಬಟನ್ ಫೋನ್‌ಗಳ ಪರಿಚಯವೂ ಅಷ್ಟಾಗಿ ಇರುವುದಿಲ್ಲ. ಸದ್ಯ ಇದೊಂದು ಘಟನೆ ಹತ್ತು ವರ್ಷಗಳ ಹಿಂದಕ್ಕೆ ನಮ್ಮನ್ನು ಕರೆದುಕೊಂಡು ಹೋದಂತೆ ಅಗಿದೆ.
