ಉಯವಾಹಿನಿ, ರಾಕಿಂಗ್‍ಸ್ಟಾರ್ ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾದ ಟಾಕ್ಸಿಕ್ ಟೀಸರ್ ಸಕತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಚಿತ್ರದ ಟೀಸರ್‍ನಲ್ಲಿ ಕಾರ್ ಸನ್ನಿವೇಶ ಸಕತ್ ಹೈಲೈಟ್ ಆಗಿದೆ. ಅಲ್ಲದೇ ಚರ್ಚೆಯ ವಿಷಯವಾಗಿದ್ದು, ಈ ಬಗ್ಗೆ ಹಲವಾರು ಟೀಕೆ, ಟಿಪ್ಪಣಿಗಳು ಶುರುವಾಗಿವೆ.
ಈ ಸನ್ನಿವೇಶದಲ್ಲಿ ಕಾಣಿಸಿಕೊಂಡ ಆ ನಟಿ ಯಾರು ಅನ್ನೋ ಕುತೂಹಲ ಕೂಡ ಜಾಸ್ತಿಯಾಗಿತ್ತು. ಆ ಸನ್ನಿವೇಶದಲ್ಲಿ ನಟಿಸಿದ ಆ ನಟಿ ನಟಾಲಿಯಾ ಬರ್ನ್ ಎಂದು ಹೇಳಲಾಗಿತ್ತು. ಅಸಲಿಗೆ ಆ ನಟಿ ಹೆಸರು ನಟಾಲಿಯಾ ಅಲ್ಲ. ಟಾಕ್ಸಿಕ್ ಚಿತ್ರದ ನಿರ್ದೇಶಕಿ ಗೀತು ಮೋಹನ್‍ದಾಸ್ ಆ ನಟಿಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಟಾಕ್ಸಿಕ್ ಟೀಸರ್‌ನಲ್ಲಿ ಕಾಣಿಸಿಕೊಂಡ ಆ ಸೆನ್ಸೇಷನಲ್ ಗರ್ಲ್ ಬೀಟ್ರಿಜ್ ಬಾಚ್ ಎಂದು ಟಾಕ್ಸಿಕ್ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಬರೆದುಕೊಂಡಿದ್ದಾರೆ. ಫೋಟೋ ಜೊತೆಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕಿ ಟೀಸರ್ ಬಗ್ಗೆ ಚರ್ಚೆಯಾಗ್ತಿರುವ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.
