ಉಯವಾಹಿನಿ, ಕಿರುತೆರೆ ಹಾಗೂ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರುವ ನಿವೇದಿತಾ ಗೌಡ ಸದಾ ರೀಲ್ಸ್ ಮಾಡುತ್ತಾ ಫುಲ್ ಆ್ಯಕ್ಟಿವ್ ಆಗಿರ್ತಾರೆ. ಅದೇ ರೀತಿ ಈಗ ಫ್ಲೋರಿಡಾದ ಪಾಮ್ ಬೀಚ್‌ನಲ್ಲಿ ನಿವೇದಿತಾ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಗುಲಾಬಿ ಬಣ್ಣದ ಸ್ವಿಮ್ ಸೂಟ್‌ನಲ್ಲಿ ನಿವೇದಿತಾ ಕಡಲ ಅಲೆಗಳಲ್ಲಿ ತೇಲಾಡಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ, Sea Level Calm ಎಂದು ಬರೆದುಕೊಂಡಿದ್ದಾರೆ. ಕಡಲ ಅಲೆಯಲ್ಲಿ ನಿವಿಯ ಕ್ಯೂಟ್ ಕ್ಯೂಟ್ ನಗುವಿನ ಅಲೆ ಸೇರಿ ಗುಲಾಬಿ ದಳವೇ ತೇಲುವಂತೆ ಭಾಸವಾಗುತ್ತಿದೆ.ಈ ಫೊಟೋಗೆ ಅಭಿಮಾನಿಗಳು ಬೆಂಕಿ ಕಾಮೆಂಟ್ ಮಾಡುತ್ತಿದ್ದಾರೆ. ಕೊನೆಯಲ್ಲಿ ಪುಟ್ಟ ಸೀ ಬರ್ಡ್ ಫೋಟೋವನ್ನು ಸಹ ಹಂಚಿಕೊಂಡು ಸಂಭ್ರಮಿಸಿದ್ದಾರೆ.
