ಉಯವಾಹಿನಿ, ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಭಾರತ ತಂಡದ ಉಪ ನಾಯಕ ಶ್ರೇಯಸ್‌ ಅಯ್ಯರ್‌ ಎದುರು ನೋಡುತ್ತಿದ್ದಾರೆ. ಜನವರಿ 11 ರಂದು ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಕಾದಾಟ ನಡೆಸಲಿವೆ. 2025ರ ಅಕ್ಟೋಬರ್‌ 25 ರಂದು ಆಸ್ಟ್ರೇಲಿಯಾ ವಿರುದ್ಧ ಶ್ರೇಯಸ್‌ ಅಯ್ಯರ್‌ ಭಾರತದ ಪರ ಕೊನೆಯ ಪಂದ್ಯವನ್ನು ಆಡಿದ್ದರು. ಈ ಸರಣಿಯ ವೇಳೆ ಅವರು ಪಕ್ಕೆಲಬು ಗಾಯಕ್ಕೆ ತುತ್ತಾಗಿದ್ದರು. ಇದೀಗ ಸಂಪೂರ್ಣ ಫಿಟ್‌ ಆಗಿರುವ ಅಯ್ಯರ್‌ ಭಾರತ ಏಕದಿನ ತಂಡಕ್ಕೆ ಮರಳಿದ್ದಾರೆ.

ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಯಿಂದಲೂ ಸಾಧ್ಯವಾಗದ ಒಡಿಐ ದಾಖಲೆಯನ್ನು ಬರೆಯಲು ಶ್ರೇಯಸ್‌ ಅಯ್ಯರ್‌ ಸಜ್ಜಾಗುತ್ತಿದಾರೆ. ಅವರು 83 ರನ್‌ಗಳನ್ನು ಗಳಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ಮೈಲುಗಲ್ಲು ತಲುಪಲಿದ್ದಾರೆ. ಅಂದಹಾಗೆ ಕಿವೀಸ್‌ ಎದುರು ಮೂರು ಏಕದಿನ ಪಂದ್ಯಗಳಲ್ಲಿ ಭಾರತ ತಂಡದ ಉಪ ನಾಯಕನಿಗೆ ಅವಕಾಶವಿದೆ. 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅಯ್ಯರ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ತಮ್ಮ ಒಡಿಐ ವೃತ್ತಿ ಜೀವನದಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಲು ಶ್ರೇಯಸ್‌ ಅಯ್ಯರ್‌ಗೆ ಇನ್ನು ಕೇವಲ 83 ರನ್‌ಗಳ ಅಗತ್ಯವಿದೆ. ಸದ್ಯ ಇವರು 73 ಪಂದ್ಯಗಳ 67 ಇನಿಂಗ್ಸ್‌ಗಳಿಂದ 2917 ರನ್‌ಗಳನ್ನು ಕಲೆ ಹಾಕಿದ್ದಾರೆ. ಕಿವೀಸ್‌ ಎದುರು ಮೊದಲನೇ ಏಕದಿನ ಪಂದ್ಯದಲ್ಲಿ ಅವರು 83 ರನ್‌ ಗಳಿಸಿದರೆ, 70ಕ್ಕೂ ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಮೊದಲನೇ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!