
ಉದಯವಾಹಿನಿ, ಬೆಂಗಳೂರು: ನನ್ನ ಗಂಡ ವಿಚಿತ್ರವಾಗಿ ವರ್ತನೆ ಮಾಡ್ತಾನೆ.. ಮನೆಯಲ್ಲಿ ತಂದೆ ತಾಯಿ ಮುಂದೆಯೇ ಬೆತ್ತಲೆ ಓಡಾಡ್ತಾನೆ.. ವಿಡಿಯೋ ತೋರಿಸಿ ಅದ್ರಂತೆ ಲೈಂಗಿಕ ಕ್ರಿಯೆ ಮಾಡು ಅಂತಾ ಒತ್ತಾಯ ಮಾಡ್ತಾನೆ ಎಂದು ಆರೋಪಿಸಿ ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿ ಮೇಘಶ್ರೀ ಪತಿ ವಿರುದ್ಧ ಕೇಂದ್ರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬೆಂಗಳೂರಿನ ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆಯಷ್ಟೆ ಪತ್ನಿ ಮೇಘಶ್ರೀ ಕೊಟ್ಟಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಪತ್ನಿ ವಿರುದ್ಧ ಪತಿ ಮಂಜುನಾಥ್ ಕಾನೂನು ಹೋರಾಟ ಮಾಡಲು ಮುಂದಾಗಿದ್ದಾರೆ.
ಮೇಘಶ್ರೀ ಆರೋಪಗಳ ವಿರುದ್ಧ ಪ್ರತಿದೂರು ದಾಖಲಿಸಲು ಮುಂದಾಗಿರುವ ಪತಿ ಮಂಜುನಾಥ್, ಮೇಘಶ್ರೀ ದೂರು ಸುಳ್ಳು ಎಂದು ಹೇಳಿದ್ದಾರೆ. 30 ಲಕ್ಷ ಹಣ ಹಾಗೂ 50 ಚಿನ್ನಕ್ಕಾಗಿ ಮೇಘಶ್ರೀ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾಳೆ. ಮೇಘಾ ಈ ಮೊದಲು ಎರಡು ಮದುವೆ ಆಗಿದ್ದಳು. ಇಬ್ಬರ ವಿರುದ್ಧವೂ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟು ಇಬ್ಬರಿಗೂ ಡಿವೋರ್ಸ್ ಕೊಟ್ಟು ನನ್ನನ್ನ ಮದ್ವೆ ಆದಳು. ಇದೀಗ ಮದುವೆಯಾದ ಮೂರೇ ತಿಂಗಳಿಗೆ ನನ್ನ ವಿರುದ್ಧವೂ ದೂರು ನೀಡಿದ್ದಾಳೆ.
