ಉದಯವಾಹಿನಿ, ಟೆಹ್ರಾನ್: ಇರಾನ್ ನ ಧಾರ್ಮಿಕ ಪ್ರಭುತ್ವದ ವಿರುದ್ಧ ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಹೋರಾಟದ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 116 ಮಂದಿ ಮೃತಪಟ್ಟಿದ್ದಾರೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಇರಾನ್ ನಲ್ಲಿ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಿ, ಫೋನ್ ಸಂಪರ್ಕಗಳನ್ನೂ ತುಂಡರಿಸಿರುವುದರಿಂದ, ಅಲ್ಲಿನ ಹೋರಾಟದ ತೀವ್ರತೆಯನ್ನು ಅಳೆಯುವುದು ಕ್ಲಿಷ್ಟಕರವಾಗಿದೆ. ಆದರೆ, ಅಮೆರಿಕಾ ಮೂಲದ ಮಾನವ ಹಕ್ಕುಗಳ ಹೋರಾಟಗಾರರ ಸುದ್ದಿ ಸಂಸ್ಥೆಯೊಂದರ ಪ್ರಕಾರ, ಈ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 116ಕ್ಕೆ ಏರಿಕೆಯಾಗಿದ್ದು, 2,600ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಇರಾನ್ ನಲ್ಲಿ ಹಲವು ಬಾರಿ ಭುಗಿಲೆದ್ದಿದ್ದ ಪ್ರಕ್ಷುಬ್ಧತೆಯ ಸಂದರ್ಭಗಳಲ್ಲೂ ಈ ಸುದ್ದಿ ಸಂಸ್ಥೆ ನಿಖರ ಮಾಹಿತಿಯನ್ನು ನೀಡಿತ್ತು.
