ಉದಯವಾಹಿನಿ, ಹಾಸನ: ನಾನು ಸಾಕಿದ ಗಿಣಿ ಹದ್ದಾಗಿ ಕುಕ್ಕಿತು. ಈ ಜಿಲ್ಲೆಯಲ್ಲಿ ಕೆಲವರು ನಂಬಿಕೆ ದ್ರೋಹಿಗಳಿದ್ದಾರೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ಬೇಲೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಈ ವೇಳೆ ಇವತ್ತಿನ ರಾಜಕಾರಣಿಗಳು ನಂಬಿಕೆ ದ್ರೋಹಿಗಳಿದ್ದಾರೆ ಎಂದು ಸಾಣೇನಹಳ್ಳಿ ಸ್ವಾಮೀಜಿ ಹೇಳಿದ್ರು. ಅದು ರೇವಣ್ಣ ಅವರಿಗೆ ಅನ್ವಯ ಆಗಲ್ಲ ಅಂದ್ರು. ಸಾಣೇನಹಳ್ಳಿ ಸ್ವಾಮೀಜಿಗಳು ಹೇಳಿದ ಮಾತು ಸತ್ಯ. ಈ ಜಿಲ್ಲೆಯಲ್ಲೂ ಕೆಲವರು ನಂಬಿಕೆ ದ್ರೋಹಿಗಳಿದ್ದಾರೆ ಎಂದು ಶಿವಲಿಂಗೇಗೌಡರಿಗೆ ಕುಟುಕಿದರು.
ಕೆಲವು ಟೈಂನಲ್ಲಿ ಕುಮಾರಣ್ಣ ಒಳ್ಳೆಯವರನ್ನ ನಂಬಲ್ಲ. ಕೆಲವರು ಅವರನ್ನು ನಂಬಿಸಿ ಬಿಡ್ತಾರೆ. ಈ ಜಿಲ್ಲೆಯಲ್ಲಿ ಜೆಡಿಎಸ್ (JDS) ಮುಗಿಸಬೇಕು ಎಂದು ಕಾಂಗ್ರೆಸ್‍ನವರು ಪಣ ತೊಟ್ಟಿದ್ದಾರೆ. ಅರಸೀಕೆರೆಯಿಂದ ಪ್ರಾರಂಭ ಮಾಡಿದ್ದೇನೆ. ಕಾಂಗ್ರೆಸ್ 31 ಜಿಲ್ಲೆಯಲ್ಲಿ ಸಭೆ ಮಾಡಲಿಲ್ಲ. ದೇವೇಗೌಡರ ಶಕ್ತಿ ಕುಂದಿಸಲು ಹಾಸನದಲ್ಲಿ ಎರಡು ಸಭೆ ಮಾಡಿದರು ಎಂದು ಕಿಡಿಕಾರಿದರು. ಜ.11 ರಂದು ಅರಸೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಲಿಂಗೇಗೌಡರು ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮುಂದಿನ ಚುನಾವಣೆಯಲ್ಲಿ ರೇವಣ್ಣರನ್ನು ಕೆಲವರು ಇಲ್ಲಿ ನಿಲ್ಲಿಸಲು ಹೊರಟಿದ್ದಾರೆ. ಬಂದು ನಿಲ್ಲಲಿ, ಜನ ಏನು ಎಂದು ತೋರಿಸುತ್ತಾರೆ ಎಂದು ಸವಾಲೆಸೆದಿದ್ದರು
