ಉದಯವಾಹಿನಿ, ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ (ISRO)ಪಿಎಸ್‌ಎಲ್‌ವಿ ಮಿಷನ್ ಉಡಾವಣೆ ವಿಫಲವಾಗಿದೆ.
ಡಿಆರ್‌ಇಒದ ವ್ಯೂಹಾತ್ಮಕ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದ್ದ ಅನ್ವೇಶಾ/ಇಒಎಸ್‌- ಎನ್‌1 ಹಾಗೂ 14 ಉಪಗ್ರಹಗಳನ್ನು ಹೊತ್ತುಕೊಂಡು ಪಿಎಸ್‌ಎಲ್‌ವಿ ಸಿ62 ರಾಕೆಟ್‌ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 10:18ಕ್ಕೆ ಉಡಾವಣೆಗೊಂಡಿತ್ತು.
ರಾಕೆಟ್‌ ಆರಂಭ ಚೆನ್ನಾಗಿಯೇ ಆಗಿತ್ತು. ಆದರೆ ಮೂರನೇ ಹಂತದಲ್ಲಿ ದೋಷ ಕಂಡು ಬಂದಿದ್ದರಿಂದ ಈ ಮಿಷನ್‌ ಯಶಸ್ವಿಯಾಗಲಿಲ್ಲ ಎಂದು ಇಸ್ರೋ ಹೇಳಿದೆ. ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಪ್ರತಿಕ್ರಿಯಿಸಿ, ಇಂದು, ನಾವು PSLV C62 / EOS – N1 ಮಿಷನ್ ಅನ್ನು ಪ್ರಯತ್ನಿಸಿದ್ದೇವೆ. PSLV ರಾಕೆಟ್‌ ಎರಡು ಘನ ಮತ್ತು ಎರಡು ದ್ರವ ಹಂತಗಳನ್ನು ಹೊಂದಿರುವ ನಾಲ್ಕು ಹಂತದ ರಾಕೆಟ್‌ನ ಮೂರನೇ ಹಂತದ ಅಂತ್ಯದ ವೇಳೆಗೆ ವಾಹನದ ಕಾರ್ಯಕ್ಷಮತೆ ನಿರೀಕ್ಷೆಯಂತೆ ಇತ್ತು. ಆದರೆ ಮೂರನೇ ಹಂತದ ಅಂತ್ಯದ ವೇಳೆಗೆ ರಾಕೆಟ್‌ನಲ್ಲಿ ಸಮಸ್ಯೆ ಕಾಣಿಸಿ ತನ್ನ ಪಥದಲ್ಲಿ ಬದಲಾವಣೆ ಮಾಡಿತು. ನಾವು ಡೇಟಾವನ್ನು ವಿಶ್ಲೇಶಿಸಿ ಶೀಘ್ರವೇ ನಿಖರ ಕಾರಣವನ್ನು ಪತ್ತೆ ಮಾಡುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!