ಉದಯವಾಹಿನಿ , ಬೆಂಗಳೂರು: ಸಂಕ್ರಾಂತಿ ಮಾರನೇ ದಿನ ಡಿಸಿಎಂ ಡಿ.ಕೆ ಶಿವಕುಮಾರ್ ಡೆಲ್ಲಿ ಟೂರ್ ಫಿಕ್ಸ್ ಆಗಿದ್ರೂ ಜ.27ರ ನಂತರವಷ್ಟೇ ದೆಹಲಿಗೆ ತೆರಳಲು ಸಿಎಂ ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದಾರೆ. ಈ ತಿಂಗಳ ಅಂತ್ಯಕ್ಕೆ ದೆಹಲಿ ಭೇಟಿಗೆ ಮುಂದಾಗಿದ್ದು, ರಾಹುಲ್ ಲಭ್ಯತೆ ನೋಡಿಕೊಂಡು ಹೋಗಲು ಸಿದ್ಧತೆ ನಡೆಸಿದ್ದಾರೆ. ಬಜೆಟ್ ಮಂಡನೆ ಸಿದ್ಧತೆಗೆ ಹೈಕಮಾಂಡ್ ಅನುಮತಿ ಕೇಳಿ ಬರಲು ಸಿದ್ದರಾಮಯ್ಯ ತಂತ್ರ ರೂಪಿಸಿದ್ದಾರೆ. ಅಂದಹಾಗೆ ಜ.18, 19ರಂದು ಮೈಸೂರು ಜಿಲ್ಲಾ ಪ್ರವಾಸದಲ್ಲಿ ಸಿಎಂ ಸಿದ್ದರಾಮಯ್ಯ ಬ್ಯುಸಿಯಾಗಿ, ಜ.20, 21 ವಿಶೇಷ ಅಧಿವೇಶನದ ಬಗ್ಗೆ ಸಿಎಂ ಹೆಚ್ಚು ಗಮನಹರಿಸುತ್ತಿದ್ದಾರೆ.
ಜ.22ರಿಂದ 27ರ ತನಕ ರಾಹುಲ್ ಗಾಂಧಿ ಅಲಭ್ಯ ಸಂದೇಶ ಬಂದಿದ್ದು, ರಾಹುಲ್ ಪ್ರವಾಸದಿಂದ ದೆಹಲಿಗೆ ಬಂದ ಬಳಿಕವಷ್ಟೇ ಹೈಕಮಾಂಡ್ ಭೇಟಿಗೆ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ.
ಈ ನಡುವೆ, ಡಿಸಿಎಂ ಡಿಕೆಶಿಗೆ ಒಂದಿಲ್ಲೊಂದು ಅಡೆತಡೆ ತಪ್ಪಿದ್ದಲ್ಲ. ರಾಹುಲ್ ಭೇಟಿಗೆ ಸಮಯ ಸಿಕ್ಕರೆ ಜ.16ಕ್ಕೆ ಸಿಗಬೇಕು ಇಲ್ಲದಿದ್ದರೆ ಈ ತಿಂಗಳ ಅಂತ್ಯದ ತನಕ ಸಿಗಲ್ಲ. ಜ.18ರಿಂದ 27ರ ತನಕ ರಾಹುಲ್ ಅಲಭ್ಯ ಎಂಬ ಸಂದೇಶವಿದ್ದು, ಆ 9 ದಿನ ದೆಹಲಿಯಲ್ಲಿ ಇರುವುದಿಲ್ಲ ಎನ್ನಲಾಗಿದೆ. ಹಾಗಾಗಿ ಶತಾಯುಗತಾಯ ಜ.16ರಂದೇ ರಾಹುಲ್ ಭೇಟಿಗೆ ಡಿಕೆಶಿ ಸರ್ಕಸ್ ಮಾಡ್ತಿದ್ದಾರೆ.
