ಉದಯವಾಹಿನಿ , ಬೆಂಗಳೂರು: ಪಶ್ಚಿಮ ಬಂಗಾಳ, ಅಸ್ಸಾಂ ಚುನಾವಣೆಗೆ ಎಷ್ಟು ದುಡ್ಡು ಕೊಡ್ತೀರಾ ಅಂತ ಕೇಳಲು ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಕರೆದಿರಬೇಕು ಎಂದು ಮಾಜಿ ಸಚಿವ ಸಿ.ಟಿ ರವಿ ಆರೋಪಿಸಿದ್ದಾರೆ.
ಸಿಎಂ-ಡಿಸಿಎಂ ರಾಹುಲ್ ಗಾಂಧಿ ಭೇಟಿ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ಕಾಂಗ್ರೆಸ್ ಆಂತರಿಕ ವಿಚಾರ ಹಾಗೂ ಕಚ್ಚಾಟಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮೂಗು ತೋರಿಸಲ್ಲ. ಬುದ್ಧಿ ಇಲ್ಲದೇ ಇರುವ ರಾಹುಲ್ ಗಾಂಧಿ ಇವರ ಕಚ್ಚಾಟಕ್ಕೆ ಬುದ್ಧಿ ಹೇಳುತ್ತಾರೆ ಅಂತ ವಿಶ್ವಾಸ ಇದೆಯಾ? ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಕಚ್ಚಾಡುತ್ತಿರುವುದರಿಂದ ರಾಜ್ಯದ ಆಡಳಿತದ ಮೇಲೆ ಕೆಟ್ಟ ಪರಿಣಾಮಗಳು ಬೀಳ್ತಾ ಇದೆ. ಇದಕ್ಕೆಲ್ಲ ರಾಹುಲ್ ಗಾಂಧಿ ಬುದ್ಧಿ ಹೇಳ್ತಾರಾ? ಬುದ್ಧಿ ಇರೋರು ಬುದ್ಧಿ ಹೇಳುತ್ತಾರೆ, ಆದರೆ ಬುದ್ಧಿ ಇಲ್ದೆ ಇರೋರು ಏನ್ ಹೇಳ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಡಿಸಿಎಂ ಹಾಗೂ ಸಿಎಂ ಇಬ್ಬರನ್ನು ಕರೆದಿದ್ದಾರೆ ಅಂದ್ರೆ ಪಶ್ಚಿಮ ಬಂಗಾಳ, ಅಸ್ಸಾಂ ಚುನಾವಣೆ ಇದೆ. ಎಷ್ಟು ದುಡ್ಡು ಕೊಡ್ತೀರಾ ಅಂತ ಕೇಳೋಕೆ ಇರಬಹುದು. ಕರ್ನಾಟಕದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯದ ಹಿತಾಸಕ್ತಿ ಕಾಪಾಡೋಕೆ ಆಸಕ್ತಿ ಇಲ್ಲ ಎಂದು ಕಿಡಿಕಾರಿದ್ದಾರೆ.
