ಉದಯವಾಹಿನಿ, ಹೊಸಕೋಟೆ : ಕನ್ನಡಿಗರುಕನ್ನಡತನವನ್ನುಅರಿತುಆಂಗ್ಲ ಮಾಧ್ಯಮದ ವ್ಯಾಮೋಹವನ್ನುತೊರೆದುಕನ್ನಡ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುವ ಸಂಕಲ್ಪತೊಟ್ಟು ಭಾಷೆಯನ್ನು ಶ್ರೀಮಂತಗೊಳಿಸುವತ್ತ ಕಾರ್ಯಪ್ರವೃತ್ತರಾಗಬೇಕುಎಂದು ಹೊಸಕೋಟೆತಾಲೂಕು ಕಸಾಪ ಅಧ್ಯಕ್ಷ ಹೆಚ್.ಎಂ.ಮುನಿರಾಜ್ ತಿಳಿಸಿದರು.
ತಾಲೂಕಿನತಾವರೆಕೆರೆ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾಆವರಣದಲ್ಲಿ ವಿದ್ಯಾರ್ಥಿಗಳಿಗೆ ದಾನಿಗಳಿಂದ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಾ ಮಾತನಾಡಿದರು.
ಪೋಷಕರುತಮ್ಮ ಮಕ್ಕಳಿಗೆ ಬಾಲ್ಯದಿಂದಲೆಕನ್ನಡ ನಾಡು ನುಡಿಯ ಮಹತ್ವವನ್ನು ತಿಳಿಸಬೇಕು.ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯುವಂತಹ ವಾತಾವರಣವನ್ನುಕಲ್ಪಿಸಬೇಕು. ಕನ್ನಡ ಭಾಷೆಯ ಸೊಗಡಿನ ಶ್ರೀಮಂತಿಕೆಯನ್ನು ಮೆರೆಸಬೇಕಾಗಿದೆ. ಕನ್ನಡ ಶಾಲೆಯ ಏಳಿಗೆಗೆ ಕಂಕಣತೊಟ್ಟಿರುವ ಟಿ. ನಾಗರಾಜ್ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಸ್ವಂತಖರ್ಚಿನಿಂದ ಕಲಿಕಾ ಸಾಮಗ್ರಿಗಳನ್ನು ನೀಡುತ್ತಿದ್ದು.ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯಲ್ಲಿಅತ್ಯಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿಗೌರವಿಸುತ್ತಿರುವುದುಇತರರಿಗೆಆದರ್ಶಪ್ರಾಯವಾಗಿದೆಎಂದರು.
ನಿಕಟ ಪೂರ್ವಜಿಲ್ಲಾಗೌರವಾಧ್ಯಕ್ಷ ಟಿ. ನಾಗರಾಜ್ ಮಾತನಾಡಿ, ಕನ್ನಡಗರಿಗೆಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗಿ ಕನ್ನಡ ಭಾಷೆಗೆಕಂಟಕವಾಗಿ ಪರಿಣಮಿಸಿದ್ದು, ಕನ್ನಡವನ್ನು ಮಾತನಾಡುವವರನ್ನು ಹುಡುಕುವವಂತಹ ದು;ಸ್ಥಿತಿ ಬಂದಿದೆ. ತಂದೆ-ತಾಯಿಗಳು ಮನೆಯಿಂದಲೇಕನ್ನಡ ಭಾಷೆಯ ಬಗ್ಗೆ ಮಕ್ಕಳಲ್ಲಿ ಪ್ರೀತಿಗೌರವವನ್ನು ಮೂಡಿಸಬೇಕೆಂದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕು ಕಾರ್ಯದರ್ಶಿ ಬಚ್ಚೇಗೌಡ, ಬಿಎಂಟಿಸಿ ನಾಗರಾಜ್, ನಂದಗುಡಿ ಹೋಬಳಿ ಅಧ್ಯಕ್ಷ ಬಿ. ಹರೀಶ್, ಖಜಾಂಚಿ ನಾರಾಯಣಗೌಡ, ಮುಖ್ಯ ಶಿಕ್ಷಕ ವೆಂಕಟರಮಣಪ್ಪ, ಶಿಕ್ಷಕರಾದ ಸುಧಾಮಣಿ, ವನಿತಾ, ಮಂಜುಳಾ, ಕವಿತ, ಸುವರ್ಣ, ಪವಿತ್ರ, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!