ಉದಯವಾಹಿನಿ, ಸತಾರ (ಮಹಾರಾಷ್ಟ್ರ) ರಾಜ್ಯದಲ್ಲಿ ನಡೆದ ಅವಳಿ ದುರಂತದಲ್ಲಿ ಇಬ್ಬರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬರು ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯ ಸಮಯದಲ್ಲಿ ಹುತಾತ್ಮರಾದರೆ, ಇನ್ನೊಬ್ಬರು ತಮ್ಮ ಪತ್ನಿಯ ಹೆರಿಗೆಗಾಗಿ ರಜೆಯಲ್ಲಿದ್ದಾಗ ಸಂಭವಿಸಿದ ರಸ್ತೆ ದುರಂತದಲ್ಲಿ ಅಸುನೀಗಿದ್ದಾರೆ. ಇಬ್ಬರೂ ಸತಾರ ಜಿಲ್ಲೆಗೆ ಸೇರಿದವರಾಗಿದ್ದಾರೆ.

ಮಗು ಜನಿಸುವ ಗಂಟೆಗಳ ಮೊದಲು ತಂದೆ ಸಾವು: ಸತಾರ ತಾಲೂಕಿನ ಅರೆದಾರೆ ಗ್ರಾಮದ ಯೋಧ ಪ್ರಮೋದ್ ಪರಶುರಾಮ್ ಜಾಧವ್ ಅವರು, ತಮ್ಮ ಪತ್ನಿಯ ಹೆರಿಗೆ ಹಿನ್ನೆಲೆ ರಜೆಯಲ್ಲಿದ್ದರು. ಜನವರಿ 9ರಂದು ರಾತ್ರಿ 11:30 ರ ಸುಮಾರಿಗೆ ಅವರು ವಾಧೆ ಫಾಟಾದಿಂದ ಸತಾರ ಕಡೆಗೆ ಬರುತ್ತಿದ್ದಾಗ ಅವರ ಮೋಟಾರ್ ಸೈಕಲ್​​ಗೆ ಟ್ರಕ್‌ ಡಿಕ್ಕಿಯಾಗಿತ್ತು. ಯೋಧನ ತಲೆಗೆ ಗಂಭೀರ ಗಾಯವಾಗಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಯೋಧ ಜಾಧವ್ ಅವರಿಗೆ ಒಂದು ವರ್ಷದ ಹಿಂದಷ್ಟೇ ವಿವಾಹವಾಗಿತ್ತು. ಅವರ ಗರ್ಭಿಣಿ ಪತ್ನಿ ಹೆರಿಗೆಗಾಗಿ ಸತಾರದ ಆಸ್ಪತ್ರೆಗೆ ದಾಖಲಾಗಿದ್ದರು. ಇದಕ್ಕಾಗಿ ಯೋಧ 8 ದಿನಗಳ ಪಿತೃತ್ವ ರಜೆಯ ಮೇಲೆ ಮನೆಗೆ ಬಂದಿದ್ದರು. ರಾತ್ರಿ ಯೋಧ ರಸ್ತೆ ಅಪಘಾತದಲ್ಲಿ ಸಾವಿಗೀಡಾದರೆ, ಮರುದಿನ ಬೆಳಗ್ಗೆ ಪತ್ನಿಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಮಗಳನ್ನು ನೋಡಲು ತಂದೆ ಜೀವಂತವಾಗಿಲ್ಲ ಎಂಬುದು ಮನಕಲಕುವ ಘಟನೆಯಾಗಿದೆ.
ಯೋಧನಿಗೆ ಪತ್ನಿ, ಮಗಳಿಂದ ಅಂತಿಮ ವಿದಾಯ: ಅರೆದಾರೆ ಗ್ರಾಮದ ಸ್ಮಶಾನದಲ್ಲಿ ಯೋಧ ಪ್ರಮೋದ್ ಜಾಧವ್ ಅವರ ಅಂತ್ಯಕ್ರಿಯೆನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು. ಅವರ ಪತ್ನಿ ಮತ್ತು ನವಜಾತ ಶಿಶು ಅಂತಿಮ ವಿದಾಯ ಹೇಳಿದರು. ಅಂತ್ಯಕ್ರಿಯೆಯ ವೇಳೆ ಪತ್ನಿಯ ಕಣ್ಣೀರು, ಆಕ್ರಂದನ ನೆರೆದಿದ್ದವರ ಕರುಳು ಹಿಂಡಿತು.

 

Leave a Reply

Your email address will not be published. Required fields are marked *

error: Content is protected !!