ಉದಯವಾಹಿನಿ, : ಮುಂದಿನ ತಿಂಗಳು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026 ರ ಟಿ 20 ವಿಶ್ವಕಪ್‌ಗಾಗಿ ನೆದರ್ಲ್ಯಾಂಡ್ಸ್ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಸ್ಕಾಟ್ ಎಡ್ವರ್ಡ್ಸ್ ಮತ್ತೊಮ್ಮೆ ಮೆಗಾ ಟೂರ್ನಮೆಂಟ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಈ ಬಾರಿ ತಂಡವು ಹಿಂದಿನ ವರ್ಷಗಳಿಗಿಂತ ಬಹಳ ಭಿನ್ನವಾಗಿ ಕಾಣುತ್ತದೆ. ಇತ್ತೀಚಿನ ಪಂದ್ಯಗಳ ಪ್ರದರ್ಶನ ಆಧಾರದಲ್ಲಿ ಹಲವಾರು ಪ್ರಮುಖ ಕ್ರಿಕೆಟಿಗರನ್ನು ತಂಡದಿಂದ ಕೈಬಿಡಲಾಗಿದೆ.
ವರ್ಷದ ಆರಂಭದಲ್ಲಿ ನಡೆದ ಟಿ20 ವಿಶ್ವಕಪ್ ಯುರೋಪ್ ಪ್ರದೇಶದ ಫೈನಲ್‌ನಲ್ಲಿ ಆಡಿದ ನಂತರ ಬಾಂಗ್ಲಾದೇಶ ಸರಣಿಯನ್ನು ತಪ್ಪಿಸಿಕೊಂಡ ಆಟಗಾರರನ್ನು ಮರಳಿ ಕರೆಸಿಕೊಳ್ಳಲಾಗಿದೆ. ರೋಲೋಫ್ ವ್ಯಾನ್ ಡೆರ್ ಮೆರ್ವೆ, ಬಾಸ್ ಡಿ ಲೀಡೆ, ಮೈಕೆಲ್ ಲೆವಿಟ್ ಮತ್ತು ಜ್ಯಾಕ್ ಲಯನ್-ಕ್ಯಾಚೆಟ್ ಮತ್ತೆ ತಂಡಕ್ಕೆ ಪ್ರವೇಶಿದ್ದಾರೆ. ಅವರ ಸೇರ್ಪಡೆಯು ತಂಡಕ್ಕೆ ಹೆಚ್ಚಿನ ಬಲ ನೀಡಿದೆ.
ತಂಡವು ಇಬ್ಬರು ಹಿರಿಯ ಆಲ್‌ರೌಂಡರ್‌ಗಳನ್ನು ಸಹ ಮರಳಿ ಕರೆತಂದಿದೆ. 2024 ರ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ನಂತರ ಕಾಲಿನ್ ಅಕೆರ್ಮನ್ T20I ಕ್ರಿಕೆಟ್‌ಗೆ ಮರಳಿದ್ದಾರೆ. ಇಂಗ್ಲೆಂಡ್‌ನ 2025 ರ ವಿಟಾಲಿಟಿ ಬ್ಲಾಸ್ಟ್‌ನಲ್ಲಿ ಅವರು ಡರ್ಹ್ಯಾಮ್ ಪರ 14 ಪಂದ್ಯಗಳಲ್ಲಿ 304 ರನ್ ಗಳಿಸಿದರು. 34 ವರ್ಷದ ಟಿಮ್ ವ್ಯಾನ್ ಡೆರ್ ಗುಗ್ಟನ್ ಕೂಡ T20I ಗಳಿಂದ ಒಂದು ವರ್ಷ ದೂರವಿದ್ದು, ಹತ್ತು ಬ್ಲಾಸ್ಟ್ ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಜುಲೈ 2024 ರಲ್ಲಿ ನಡೆದ ಹಿಂದಿನ T20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ನೆದರ್‌ಲ್ಯಾಂಡ್ಸ್ ತಂಡವನ್ನು ಪ್ರತಿನಿಧಿಸಿದ್ದ ಲೋಗನ್ ವ್ಯಾನ್ ಬೀಕ್ ವೇಗದ ಬೌಲಿಂಗ್‌ನ ಆಳವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅಂದಿನಿಂದ, ಅವರು ನ್ಯೂಜಿಲೆಂಡ್‌ನ ಸೂಪರ್ ಸ್ಮ್ಯಾಶ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವೆಲ್ಲಿಂಗ್ಟನ್ ಪರ ಏಳು ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಪ್ರದರ್ಶನ ಅವರನ್ನು ಮತ್ತೆ ತಂಡಕ್ಕೆ ಕರೆಸಿಕೊಳ್ಳುವಂತೆ ಮಾಡಿದೆ.
