ಉದಯವಾಹಿನಿ, ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ ತಂತ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಆದರೆ ಅವರು ಬಾಲ್ಯದ ದಿನಗಳಂತೆ ಇದೀ ಕ್ರಿಕೆಟ್ ಅನ್ನು ಆನಂದಿಸುತ್ತಿದ್ದಾರೆಂದು ಸ್ಪಿನ್ ದಿಗ್ಗಜ ಆರ್ ಅಶ್ವಿನ್ ತಿಳಿಸಿದ್ದಾರೆ. ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿರುವ ವಿರಾಟ್ ಕೊಹ್ಲಿ, 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಹಾಗಾಗಿ 50 ಓವರ್‌ಗಳ ಸ್ವರೂಪದಲ್ಲಿ ಮುಂದುವರಿಯುತ್ತಿದ್ದಾರೆ. ಅದರಂತೆ ವಿರಾಟ್ ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಎಲ್ಲಾ ಪಂದ್ಯಗಳಲ್ಲಿಯೂ ಅವರು ರನ್ ಗಳಿಸುತ್ತಿದ್ದಾರೆ.
ಜನವರಿ 11 ರಂದು ವಡೋದರಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 85ನೇ ಅಂತಾರಾಷ್ಟ್ರೀಯ ಶತಕವನ್ನು ಕಳೆದುಕೊಂಡ ಬಳಿಕ ಆರ್ ಅಶ್ವಿನ್ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ಈ ಪಂದ್ಯದಲ್ಲಿ ಅವರು 91 ಎಸೆತಗಳಲ್ಲಿ 93 ರನ್‌ಗಳನ್ನು ಕಲೆ ಹಾಕಿದ್ದರು. ಅದರಂತೆ ಈ ಪಂದ್ಯದಲ್ಲಿ ಭಾರತ ತಂಡ, ಗೆಲುವು ಪಡೆಯುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾರತ ತಂಡದ 301 ರನ್‌ಗಳ ಯಶಸ್ವಿ ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು 2023ರ ನಂತರ ಇದೇ ಮೊದಲ ಬಾರಿ 90 ರನ್‌ಗಳಲ್ಲಿ ವಿಕೆಟ್ ಒಪ್ಪಿಸಿದಂತಾಯಿತು. ಭಾರತವನ್ನು ಅಂತಿಮ ಗೆರೆಯನ್ನು ದಾಟಿಸಲು ಅವರು ವಿಫಲರಾಗುವುದನ್ನು ನೋಡುವುದು ಅಸಾಮಾನ್ಯವಾಗಿದ್ದರೂ, ಅವರ ಇನಿಂಗ್ಸ್ ಅಂತಿಮ ಗೆಲುವಿಗೆ ವೇದಿಕೆಯನ್ನು ರೂಪಿಸಿತು.
“ಅವರು (ವಿರಾಟ್ ಕೊಹ್ಲಿ) ತಮ್ಮ ಮನಸಿನಲ್ಲಿ ಯಾವುದೇ ಅಂಶಗಳು ಇಲ್ಲ ಎಂಬಂತೆ ಅವರು ಕಾಣಿಸುತ್ತಿದ್ದಾರೆ. ಅವರು ಏನಾದರೂ ಬದಲಾಗಿದ್ದಾರಾ ಎಂದು ನೀವು ನನಗೆ ಪ್ರಶ್ನೆಯನ್ನು ಕೇಳಿದ್ದೀರಿ, ನಿಜಕ್ಕೂ ಅವರು ಬದಲಾಗಿಲ್ಲ. ಅವರು ತಮ್ಮ ಕ್ರಿಕೆಟ್ ಅನ್ನು ಆನಂದಿಸಬೇಕೆಂದು ಬಯಸುತ್ತಿದ್ದಾರೆ. ತಮ್ಮ ಬಾಲ್ಯದಲ್ಲಿ ಬ್ಯಾಟಿಂಗ್ ಅನ್ನು ಹೇಗೆ ಆನಂದಿಸುತ್ತಿದ್ದರೋ ಈಗಲೂ ಅದೇ ರೀತಿ ಆನಂದಿಸುತ್ತಿದ್ದಾರೆ. ಹಲವು ವರ್ಷಗಳ ಕಾಲ ಕ್ರಿಕೆಟ್ ಆಡಿದ ಅನುಭವವನ್ನು ಅವರು ಹೊಂದಿದ್ದಾರೆ,” ಎಂದು ಅಶ್ವಿನ್ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
