ಉದಯವಾಹಿನಿ, ಕಲಿಯುಗದ ವೈಕುಂಠ, ಶ್ರೀಮಾನ್ ನಾರಾಯಣ ವೆಂಕಟೇಶ್ವರನಾಗಿ ನೆಲೆ ನಿಂತಿರುವ ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವ ದಿನನಿತ್ಯದ ಅನ್ನಪ್ರಸಾದದ ವಿಶೇಷತೆ ಬಗ್ಗೆ ಕೇಳಿರಲು ಸಾಧ್ಯವಿಲ್ಲ. ಟಿಟಿಡಿ ಪ್ರತಿದಿನ 3 ಲಕ್ಷ ಭಕ್ತರಿಗೆ ಅದ್ಭುತವಾದ ಅನ್ನಪ್ರಸಾದವನ್ನು ನೀಡಲಾಗುತ್ತದೆ. ಕಲಿಯುಗದ ಜೀವಂತ ದೇವರು ಎಂದು ಕರೆಯಲ್ಪಡುವ ವೆಂಕಟೇಶ್ವರ ಸ್ವಾಮಿಯ ವಾಸಸ್ಥಾನವಾಗಿರುವ ತಿರುಮಲ ದೇಗುಲದಲ್ಲಿ ಭಕ್ತರು ಹಸಿದುಕೊಂಡು ಇರಬಾರದು ಎಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ. ದೇವರ ದರ್ಶನದ ನಂತರ ಜನರು ಇಲ್ಲಿ ಬಂದು ಅನ್ನ ಪ್ರಸಾದವನ್ನುಸ್ವೀಕಾರ ಮಾಡುತ್ತಾರೆ. ಇಲ್ಲಿ ಯಾವುದೇ ಬೇಧ-ಭಾವ ಇಲ್ಲದೆ ಎಲ್ಲರಿಗೂ ಅನ್ನದಾನ ಮಾಡಲಾಗುತ್ತದೆ. ಈ ಕಾರಣಕ್ಕೆ ತಿರುಮಲವನ್ನು ಹೊಟ್ಟೆ ತುಂಬಿಸುವ ಸ್ಥಳ ಎಂದು ಕರೆಯುತ್ತಾರೆ.
ಟಿಟಿಡಿಯ ಅಡಿಯಲ್ಲಿ ಬರುವ ಅನ್ನ ಪ್ರಸಾದ ಇಲಾಖೆಯು ಈ ಕಾರ್ಯವನ್ನು ನಿಭಾಯಿಸುತ್ತದೆ. ಪ್ರತಿದಿನ ಸುಮಾರು ಮೂರು ಲಕ್ಷ ಭಕ್ತರು ಅನ್ನ ಪ್ರಸಾದವನ್ನು ಸೇವನೆ ಮಾಡುತ್ತಾರೆ ಎಂಬುದೇ ತುಂಬಾ ವಿಶೇಷವಾಗಿರುವುದು. ತಿರುಮಲದಲ್ಲಿ ಮೂರು ಅಡುಗೆಮನೆಗಳು ಇದೆ. ಅದರಲ್ಲಿಯೂ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಕೇಂದ್ರ, ಶ್ರೀ ಅಕ್ಷಯ ಮತ್ತು ವಕುಲಮಠ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರಾಗಲಿ, ಊಟದ ಹಾಲ್‌ನಲ್ಲಿ ಕುಳಿತಿರುವ ಯಾತ್ರಿಕರಾಗಲಿ ಅಥವಾ ಹೊರಗೆ ಕಾಯುತ್ತಿರುವವರಾಗಲಿ, ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು ಟಿಟಿಡಿಯ ಗುರಿಯಾಗಿದೆ.
