ಉದಯವಾಹಿನಿ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನೀರಸ ಪ್ರದರ್ಶನದ ಮಾತನಾಡಿದ ಬಳಿಕ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಝ್ವಾನ್ ಅಭಿಮಾನಿಗಳಿಂದ ತೀವ್ರ ಟ್ರೋಲ್‌ಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಒಂದು ವಿಡಿಯೊದಲ್ಲಿ ಪತ್ರಕರ್ತರೊಬ್ಬರು ಪಾಕಿಸ್ತಾನದ ಗ್ರೂಪ್ ಹಂತದ ನಿರ್ಗಮನ ಕುರಿತು ಪ್ರಶ್ನಿಸಿದಾಗ ರಿಝ್ವಾನ್ ಅಚ್ಚರಿಯ ಹೇಳಿಕೆ ನೀಡಿ, ತಂಡ ಹೊರಬಿದ್ದದ್ದು ರನ್‌ರೇಟ್ ಕಾರಣದಿಂದ ಎಂದು ಹೇಳಿದರು. ಇದನ್ನು ನೋಡಿದ ಅಭಿಮಾನಿಗಳು ಪಾಕ್ ಆಟಗಾರರನ್ನು ಟೀಕಿಸಿದ್ದಾರೆ. ಅಲ್ಲದೆ ರಿಝ್ವಾನ್, ಭಾರತ ತಂಡದ ಪಂದ್ಯಗಳನ್ನು ನೋಡುವುದಿಲ್ಲ ಎಂದೂ ಹೇಳಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಪಾಕಿಸ್ತಾನದ ಮೊದಲ ಸೂಪರ್-8 ಪಂದ್ಯ ನ್ಯೂಜಿಲೆಂಡ್ ವಿರುದ್ಧ ಮಳೆಯಿಂದ ರದ್ದಾಯಿತು. ನಂತರ ಇಂಗ್ಲೆಂಡ್ ವಿರುದ್ಧ ತಂಡ ಸೋಲನುಭವಿಸಿತು. ಸೆಮಿಫೈನಲ್‌ಗೆ ಪ್ರವೇಶಿಸಲು ಕಿವೀಸ್ ಅನ್ನು ರನ್‌ರೇಟ್‌ನಲ್ಲಿ ಮೀರಿಸಲು ಶ್ರೀಲಂಕಾ ವಿರುದ್ಧ ದೊಡ್ಡ ಗೆಲುವು ಅಗತ್ಯವಾಗಿತ್ತು. ಆದರೆ ಪಂದ್ಯ ಕೊನೆಯವರೆಗೂ ಹೋರಾಟಮಯವಾಗಿ ಸಾಗಿದ್ದು, ಪಾಕಿಸ್ತಾನ ಸಣ್ಣ ಅಂತರದಲ್ಲಿ ಜಯ ಸಾಧಿಸಿದರೂ ಸೆಮಿಫೈನಲ್‌ಗೆ ತಲುಪಲು ವಿಫಲವಾಯಿತು.
