ಉದಯವಾಹಿನಿ, ‘ಕೆಜಿಎಫ್ 2′ ಬಳಿಕ ಹಲವು ವರ್ಷಗಳಿಂದ ಉದ್ದ ಕೂದಲು ಹಾಗೂ ಗಡ್ಡದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್ ಈಗ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಅವರ ಬಹುನಿರೀಕ್ಷಿತ “ಟಾಕ್ಸಿಕ್’ ಸಿನಿಮಾದ ಪಾತ್ರಕ್ಕಾಗಿ ಅವರು ಕೂದಲು ಮತ್ತು ಗಡ್ಡವನ್ನು ಶಾರ್ಟ್ ಮಾಡಿ ಸಂಪೂರ್ಣ ವಿಭಿನ್ನ ಲುಕ್ ನಲ್ಲಿ ಬಂದಿದ್ದಾರೆ.
ಈ ಹೊಸ ರೂಪ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ‘ಟಿಕೆಟ್’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕೆ ಹೊಂದುವಂತೆ ಅವರು ತಮ್ಮ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಚಿತ್ರದ ಮೊದಲ ಲುಕ್ ಬಹಿರಂಗವಾದ ನಂತರ ಯಶ್ ಕೂಡ ಸಾರ್ವಜನಿಕವಾಗಿ ಈ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಗಮನ ಸೆಳೆದಿದೆ.
