ಉದಯವಾಹಿನಿ, ಕನ್ನಡ ಚಿತ್ರರಂಗದ ಅಚ್ಚುಮೆಚ್ಚಿನ ನಟಿ, ‘ಸ್ಯಾಂಡಲ್ವುಡ್ ಸಿಂಡ್ರೆಲಾ’ ರಾಧಿಕಾ ಪಂಡಿತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟನೆಯಿಂದ ಕೆಲ ಕಾಲ ವಿರಾಮ ಪಡೆದು, ಸಂಸಾರ ಮತ್ತು ಮಕ್ಕಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದರೂ, ರಾಧಿಕಾ ಅವರ ಮೇಲಿರುವ ಅಭಿಮಾನಿಗಳ ಪ್ರೀತಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.
ರಾಧಿಕಾ ಅವರ ಜನ್ಮದಿನದ ಅಂಗವಾಗಿ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿ ತಮ್ಮ ನೆಚ್ಚಿನ ನಟಿಗೆ ಶುಭಾಶಯ ಕೋರಿದ್ದಾರೆ.
ಪ್ರತಿ ಬಾರಿಯೂ ರಾಧಿಕಾ ಅವರ ಹುಟ್ಟುಹಬ್ಬಕ್ಕೆ ರಾಕಿಂಗ್ ಸ್ಟಾರ್ ಯಶ್ ಏನು ಉಡುಗೊರೆ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಈ ಬಗ್ಗೆ ಮಾತನಾಡಿದ ರಾಧಿಕಾ, “ನಮ್ಮಿಬ್ಬರ ನಡುವೆ ಬೆಲೆಬಾಳುವ ವಸ್ತುಗಳಿಗಿಂತ ‘ಸಮಯ’ಕ್ಕೆ ಹೆಚ್ಚಿನ ಬೆಲೆಯಿದೆ. ನಾವು ಪರಸ್ಪರ ಯಾವುದೇ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಇಟ್ಟುಕೊಂಡಿಲ್ಲ. ನಾವು ಜೊತೆಯಾಗಿ ಕಳೆಯುವ ಗುಣಮಟ್ಟದ ಸಮಯವೇ ನಮಗೆ ದೊಡ್ಡ ಗಿಫ್ಟ್,” ಎಂದು ಹೇಳುವ ಮೂಲಕ ಸರಳತೆಯೇ ಸುಂದರ ಎಂಬ ಸಂದೇಶ ನೀಡಿದ್ದಾರೆ. ನಟನೆಯಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವ ರಾಧಿಕಾ, ಅಭಿಮಾನಿಗಳ ಭೇಟಿಯನ್ನು ತಾವು ಸದಾ ಎಂಜಾಯ್ ಮಾಡುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!