ಉದಯವಾಹಿನಿ, ಜೇವರ್ಗಿ: ತಾಲ್ಲೂಕಿನ ಮದರಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಅಶೋಕ್ ಪ್ಯಾಟಿ (44) ಕೊಲೆಯಾದ ವ್ಯಕ್ತಿ. ಹಣದ ವಿಷಯದಲ್ಲಿ ಎರಡು ಗುಂಪುಗಳ ಮಧ್ಯೆ ಜಗಳವಾಗಿ ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ. ಜಾನಪ್ಪ ಎಂಬಾತನು ತನ್ನ ಚಿಕ್ಕಮ್ಮಳಿಗೆ 50 ಸಾವಿರ ರೂ ಹಣ ನೀಡಿದ್ದನು. 50 ಸಾವಿರ ರೂ ಹಣವನ್ನ ಜಾನಪ್ಪನ ಚಿಕ್ಕಮ್ಮಳು ಅಶೋಕ್‌ಗೆ ಕೊಟ್ಟಿದ್ದಳು. ಜಾನಪ್ಪನು ಅಶೋಕ್‌ನಿಗೆ 50 ಸಾವಿರ ರೂ ವಾಪಾಸು ಕೇಳಿದ್ದಾಗ ಇಬ್ಬರ ಮಧ್ಯೆ ಜಗಳ ನಡೆದು, ಜಗಳ ವಿಕೋಪಕ್ಕೆ ಹೋಗಿ ಜಾನಪ್ಪ, ಗುಂಡಪ್ಪ, ಸೋಮು ಸೇರಿಕೊಂಡು ಅಶೋಕ್‌ನ ಬರ್ಬರ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಘಟನೆಯಲ್ಲಿ ಮೂವರು ಆರೋಪಿಗಳಿಗೂ ಗಾಯವಾಗಿದು, ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
