ಉದಯವಾಹಿನಿ, ಲಕ್ನೋ
: ೧೯೮೭ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿ ಕೋಟ್ಯಂತರ ಭಾರತೀಯರ ಮನೆ ಮಾತಾಗಿದ್ದ ಅತ್ಯಂತ ಜನಪ್ರಿಯ ಪೌರಾಣಿಕ ನಾಟಕ ರಮಾನಂದ ಸಾಗರ್ ಅವರ ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ತಮ್ಮ ಅಪ್ರತಿಮ ನಟನೆಗಾಗಿ ಜನಮಾನಸದಲ್ಲಿ ಸ್ಥಿರಸ್ಥಾಯಿಯಾಗಿ ಉಳಿದಿರುವ ನಟಿ ದೀಪಿಕಾ ಚಿಕಿಯಾ ಅವರು ಇತ್ತೀಚೆಗೆ ರಾಮಲಲ್ಲಾನ ದರ್ಶನಕ್ಕಾಗಿ ಅಯೋಧ್ಯೆಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದು ಮೋದಿ ಅಧಿಕಾರಕ್ಕೆ ಬಂದ ನಂತರ ಸನಾತನ ಧರ್ಮದ ಉಳಿವಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ, ಅವರು ಸನಾತನ ಧರ್ಮದ ಅನುಯಾಯಿಗಳಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ, ಇದು ಬಹಳ ಹಿಂದೆಯೇ ಆಗಬೇಕಿತ್ತು ,ಈಗ ಸಾಧ್ಯವಾಗಿದೆ. ದೈವ ಭೂಮಿ ಮತ್ತು ತೀರ್ಥಕ್ಷೇತ್ರವಾಗಿರುವ ಈ ಸ್ಥಳಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದಿದ್ದಾರೆ.
ಭಗವಾನ್ ಶ್ರೀರಾಮನ ದರ್ಶನ್ ಪಡೆದ ನಂತರ ತಮ್ಮ ಅನುಭವವನ್ನು ಹಂಚಿಕೊಂಡ, ಅವರು ಇದು ನನ್ನ ಕಲ್ಪನೆಗೂ ಮೀರಿದ್ದು ,ನಾನು ಭಗವಾನ್ ರಾಮನ ಮುಖದಲ್ಲಿ ದೈವಿಕ ಬೆಳಕನ್ನು ಕಂಡೆ,ಇಂತಹ ರಾಮನನ್ನು ನಾನು ಎಲ್ಲಿಯೂ ನೋಡಿಲ್ಲ, ನಿನ್ನೆ ರಾಮಜೀಯನ್ನು ಕಂಡಾಗ ನನ್ನ ಕಣ್ಣುಗಳು ತುಂಬಿ ಬಂದವು.
