ಉದಯವಾಹಿನಿ, ಹಾವೇರಿ: ಗಿಲ್ಲಿ ಅಣ್ಣ ನನ್ನ ಫೇವರಿಟ್, ಅವರೇ ವಿನ್ನರ್ ಆಗ್ತಾರೆ ಎಂದು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಭವಿಷ್ಯ ನುಡಿದಿದ್ದಾರೆ. ಸವಣೂರಿನಲ್ಲಿ ಮಾತನಾಡಿದ ಹನುಮಂತ, ಯಾರು ವಿನ್ನರ್ ಎಂದು ಘೋಷಣೆ ಮಾಡುವಾಗ ಎದೆಯಲ್ಲಿ ಢವಢವ ಅನಿಸುತ್ತೆ. ಈ ಬಾರಿಗೆ ಗಿಲ್ಲಿ ಚೆನ್ನಾಗಿ ಆಟವಾಡಿದ್ದಾರೆ. ಅವರು ಗೆಲ್ಲುವ ವಿಶ್ವಾಸ ನನಗೆ ಇದೆ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಭೇದಭಾವ ಮಾಡುವುದಿಲ್ಲ. ಈ ಬಾರಿ ಅತಿ ಹೆಚ್ಚು ವೋಟಿಂಗ್ ಆಗಿದೆ. ಅತಿ ಹೆಚ್ಚು ವೋಟು ಗಿಲ್ಲಿನಟ ತೆಗೆದುಕೊಂಡಿದ್ದಾರೆ. ನಾನು ಸಹ ಗಿಲ್ಲಿ ನಟನಿಗೆ ವೋಟಿಂಗ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಗಿಲ್ಲಿ ಅಣ್ಣ ಗೆಲ್ತಾನೆ. ನಾನು ಮತ್ತು ಗಿಲ್ಲಿ ಅಣ್ಣ ಭರ್ಜರಿ ಬ್ಯಾಚುಲರ್‌ನಲ್ಲಿ, ಕಾಮಿಡಿ ಕಿಲಾಡಿ ಶೋ ಮಾಡಿದ್ದೀವಿ. ಗಿಲ್ಲಿ ಅಣ್ಣನಿಗೇ ಹೆಚ್ಚು ವೋಟ್ ಬಂದಿರೋದು. ನನ್ನ ಫೇವರಿಟ್ ಗಿಲ್ಲಿ ಅಣ್ಣ. ಎಲ್ಲರಿಗೂ ಆಲ್ ದಿ ಬೆಸ್ಟ್. ಸೋತೋರು ಬೇಜಾರ್ ಮಾಡಿಕೊಳ್ಳಬೇಡಿ. ಎಲ್ಲರಿಗೂ ಆಲ್ ದಿ ಬೆಸ್ಟ್, ಗಿಲ್ಲಿ ಅಣ್ಣನಿಗೆ ವಿಶೇಷ ಆಲ್ ದಿ ಬೆಸ್ಟ್. ಸುದೀಪ್ ಸರ್ ಮುಂದೆ ನಿಲ್ಲೋದೆ ಪುಣ್ಯ. ಫೈನಲ್ ವರೆಗೂ ಹೋಗೋದೆ ಪುಣ್ಯ ಎಂದು ಮಾತನಾಡಿದ್ದಾರೆ. ಬಿಗ್ ಬಾಸ್ ಸೀಜನ್ 12ರ ವಿನ್ನರ್ ಘೋಷಣೆಗೆ ಕೆಲವೇ ಗಂಟೆ ಬಾಕಿ ಇದೆ. ಎಲ್ಲೆಡೆ ತನ್ನ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ. ಗಿಲ್ಲಿ, ರಕ್ಷಿತಾ, ಅಶ್ವಿನಿ, ರಘು, ಧನುಷ್, ಕಾವ್ಯ ಫಿನಾಲೆಯಲ್ಲಿದ್ದು, ಕಪ್ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
