ಉದಯವಾಹಿನಿ, ವಿಜಯಪುರ: ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅಡವಿಸಂಗಾಪುರ ಗ್ರಾಮದಲ್ಲಿ ನಡೆದಿದೆ. ಅತಾಲಟ್ಟಿ ಗ್ರಾಮದ ಪ್ರಮೋದ ಸುಭಾಸ ಬೀಳೂರ (12) ಹಾಗೂ ಸಂತೋಷ ಶಾಸು ಬೀಳೂರ (9) ಕೃಷಿ ಹೊಂಡದಲ್ಲಿ ಬಿದ್ದು ಅಸುನೀಗಿದ ಮಕ್ಕಳು.
ಬಬಲೇಶ್ವರ ತಾಲೂಕಿನ ಅಡವಿಸಂಗಾಪುರ ಗ್ರಾಮದ ರೈತರ ತೋಟದಲ್ಲಿ ಬಾಲಕರ ಪಾಲಕರು ಕೃಷಿ ಕೆಲಸಕ್ಕಿದ್ದರು. ಕೃಷಿ ಹೊಂಡದಲ್ಲಿ ಬಿದ್ದಿದ್ದ ತೆಂಗಿನ ಕಾಯಿ
ಆಸೆಗಾಗಿ ಎರಡೂ ಮಕ್ಕಳು ಕೃಷಿ ಹೊಂಡಕ್ಕೆ ಇಳಿದು ತೆಂಗಿನ ಕಾಯಿ ತೆಗೆಯಲು ಹೋದಾಗ ಈ ದುರಂತ ಸಂಭವಿಸಿದೆ. ಬಬಲೇಶ್ವರ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!