ಉದಯವಾಹಿನಿ, ಮೈಸೂರು: ಜಿಲ್ಲೆಯ ಟಿ.ನರಸೀಪುರ ಸಾಮಾಜಿಕ ಅರಣ್ಯ ವಲಯದ ರೇಂಜ್ ಫಾರೆಸ್ಟ್ ಅಧಿಕಾರಿ (RFO) ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾಂತರಾಜ್ ಚೌಹಾಣ್ ಅವರ ಮೃತದೇಹ ಇಂದು ಖಾಸಗಿ ಹೋಟೆಲ್‌ನಲ್ಲಿ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ ಸಬ್ ಅರ್ಬನ್ ಬಸ್ ನಿಲ್ದಾಣ ಸಮೀಪದ ಯುವರಾಜ್ ಗೆಲಾಕ್ಸಿ ಲಾಡ್ಜ್ ರೂಮಿನಲ್ಲಿ ಶವ ಪತ್ತೆಯಾಗಿದೆ.
ವಿಜಯಪುರ ಮೂಲದ ಕಾಂತರಾಜ್ 15 ದಿನಗಳ ಹಿಂದಷ್ಟೇ ಟಿ. ನರಸೀಪುರಕ್ಕೆ ವರ್ಗಾವಣೆಯಾಗಿದ್ದರು. ಭಾನುವಾರ (ಜ.18) ಮಧ್ಯಾಹ್ನ ಸ್ನೇಹಿತ ಮಲ್ಲನಗೌಡ ಪಾಟೀಲ್ ಜೊತೆಗೆ ಯುವರಾಜ್ ಗೆಲಾಕ್ಸಿ ಲಾಡ್ಜ್‌ನಲ್ಲಿ ರೂಮ್ ಬುಕ್ ಮಾಡಿದ್ದರು. ಇಂದು ಅದೇ ಲಾಡ್ಜ್‌ನ ಕುಮರನ್ ಜುವೆಲರ್ಸ್ ಹಿಂಭಾಗದ ಕಾರಿಡಾರ್‌ನಲ್ಲಿ ಶವ ಪತ್ತೆಯಾಗಿದೆ. ಶವ ಪತ್ತೆಯಾದ ಬೆನ್ನಲ್ಲೇ ಜೊತೆಗಿದ್ದ ಗಂಗಾವತಿ ಮೂಲದ ಮಲ್ಲನಗೌಡ ಪಾಟೀಲ್ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಸ್ನೇಹಿತನ ನಡೆ ತೀವ್ರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ
