ಉದಯವಾಹಿನಿ,: ಪನೀರ್ ಅಂದ್ರೆ ಯಾರಿಗ್ ತಾನೇ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪನೀರ್ ಸವಿಯಲು ಇಷ್ಟಪಡುತ್ತಾರೆ. ಗ್ಯಾಸ್ ಸ್ಟೌವ್ ಅಥವಾ ಓವನ್ ಬಳಸಿ ಮನೆಯಲ್ಲೇ ರೆಸ್ಟೋರೆಂಟ್ ಶೈಲಿಯ ತಂದೂರಿ ಪನೀರ್ ಟಿಕ್ಕಾ ತಯಾರಿಸುವ ಸುಲಭ ವಿಧಾನ ಇಲ್ಲಿದೆ ನೋಡಿ.. ನೀವು ಕೂಡ ಈ ತಂದೂರಿ ಪನೀರ್ ಟಿಕ್ಕಾ ತಯಾರಿಸಿ ಸವಿದು ನೋಡಿ…ಪನೀರ್: 250 ಗ್ರಾಂ (ದೊಡ್ಡದಾದ ಚೌಕಾಕಾರದ ತುಂಡುಗಳು)
ತರಕಾರಿಗಳು: ಈರುಳ್ಳಿ, ಕೆಂಪು ಮತ್ತು ಹಸಿರು ಕ್ಯಾಪ್ಸಿಕಂ (ದೊಡ್ಡ ತುಂಡುಗಳಾಗಿ ಕತ್ತರಿಸಿದ್ದು) ಗಟ್ಟಿ ಮೊಸರು : 1/2 ಕಪ್ ಕಡಲೆ ಹಿಟ್ಟು : 2 ಚಮಚ (ಹಗುರವಾಗಿ ಹುರಿದಿದ್ದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ಟೀ ಚಮಚ
ಕಾಶ್ಮೀರಿ ಕೆಂಪು ಮೆಣಸಿನ ಪುಡಿ: 1.5 ಚಮಚ (ಉತ್ತಮ ಬಣ್ಣಕ್ಕಾಗಿ)
ಗರಂ ಮಸಾಲಾ ಮತ್ತು ಚಾಟ್ ಮಸಾಲಾ: ತಲಾ 1 ಟೀ ಚಮಚ
ಕಸ್ತೂರಿ ಮೇಥಿ: 1 ಟೀ ಚಮಚ
ಸಾಸಿವೆ ಎಣ್ಣೆ ಅಥವಾ ಬೆಣ್ಣೆ: 1 ಟೀ ಚಮಚ
ನಿಂಬೆ ರಸ ಮತ್ತು ಉಪ್ಪು: ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:ಮ್ಯಾರಿನೇಷನ್ ಸಿದ್ಧತೆ: ಒಂದು ದೊಡ್ಡ ಬೌಲ್‌ನಲ್ಲಿ ಗಟ್ಟಿ ಮೊಸರು, ಹುರಿದ ಕಡಲೆ ಹಿಟ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಎಲ್ಲಾ ಮಸಾಲೆ ಪುಡಿಗಳು, ಉಪ್ಪು, ಸಾಸಿವೆ ಎಣ್ಣೆ ಮತ್ತು ನಿಂಬೆ ರಸವನ್ನ ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿರಿ..
ಪನೀರ್ ಮತ್ತು ತರಕಾರಿ ಸೇರಿಸುವುದು: ಸಿದ್ಧಪಡಿಸಿದ ಮಸಾಲೆಗೆ ಪನೀರ್ ತುಂಡುಗಳು, ಈರುಳ್ಳಿ ಮತ್ತು ಕ್ಯಾಪ್ಸಿಕಂ ತುಂಡುಗಳನ್ನ ಸೇರಿಸಿ. ಮಸಾಲೆ ಎಲ್ಲಾ ತುಂಡುಗಳಿಗೆ ಸಮವಾಗಿ ಅಂಟಿಕೊಳ್ಳುವಂತೆ ಹಗುರವಾಗಿ ಬೆರೆಸಿರಿ.ನೆನೆಯಲು ಬಿಡಿ: ಇದನ್ನ ಕನಿಷ್ಠ 1 ರಿಂದ 2 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ನೆನೆಯಲು ಬಿಡಿ. ಇದರಿಂದ ಪನೀರ್ ಒಳಗಿನವರೆಗೆ ಮಸಾಲೆ ಇಳಿಯುತ್ತದೆ.
ಒಂದು ನಾನ್-ಸ್ಟಿಕ್ ಪ್ಯಾನ್ ಮೇಲೆ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಸವರಿ. ಟಿಕ್ಕಾ ಸ್ಟಿಕ್‌ಗಳನ್ನ ಇಟ್ಟು ಮಧ್ಯಮ ಉರಿಯಲ್ಲಿ ಎಲ್ಲಾ ಕಡೆ ತಿರುಗಿಸುತ್ತಾ ಬೇಯಿಸಿ. ಪನೀರ್ ತುಂಡುಗಳು ಕೆಂಪಾಗಿ ಮತ್ತು ಸ್ವಲ್ಪ ಸುಟ್ಟ ಕಲೆಗಳು ಬರುವವರೆಗೆ ಬೇಯಿಸಬೇಕು.
ಹೋಟೆಲ್ ರುಚಿ: ಹೋಟೆಲ್ ರುಚಿ ಬೇಕೆಂದರೆ, ಪ್ಯಾನ್‌ನಲ್ಲಿ ಬೆಂದ ನಂತರ ಟಿಕ್ಕಾವನ್ನ ನೇರವಾಗಿ ಗ್ಯಾಸ್ ಉರಿಯ ಮೇಲೆ ಕೆಲವು ಸೆಕೆಂಡುಗಳ ಕಾಲ ತಿರುಗಿಸಿರಿ. ಬಿಸಿಯಾದ ಪನೀರ್ ಟಿಕ್ಕಾದ ಮೇಲೆ ಸ್ವಲ್ಪ ಚಾಟ್ ಮಸಾಲಾ ಉದುರಿಸಿ, ಹಸಿರು ಚಟ್ನಿ ಮತ್ತು ಈರುಳ್ಳಿ ಚೂರುಗಳೊಂದಿಗೆ ಸವಿಯಿರಿ.
