
ಉದಯವಾಹಿನಿ, ತೂಕ ಇಳಿಸಿಕೊಳ್ಳಲು ಏನೇನೋ ಪ್ರಯತ್ನ ಮಾಡಿದರೂ ದೇಹದ ಭಾರ ಮಾತ್ರ ಹಾಗೇ ಇರುತ್ತದೆ. ಆದರೆ ಬೇಗ ಭಾರ ಇಳಿಸಿಕೊಳ್ಳಬೇಕು ಎಂದರೆ ಕೆಲವೊಂದು ಟಿಪ್ಸ್‌ಗಳನ್ನು ಫಾಲೋ ಮಾಡಬೇಕು. ದಿನನಿತ್ಯದ ಅಭ್ಯಾಸಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇಂದಿನ ಗ್ಲಾಮರ್ಸ್ ಜೀವನಶೈಲಿಯಲ್ಲಿ ದೇಹ ಸ್ವಲ್ಪ ದಪ್ಪ ಕಾಣಿಸಿದರೆ ಸಾಕು ನೋಡುವವರ ಮಾತುಗಳು ಬದಲಾಣೆ ಆಗುತ್ತವೆ. ಹೀಗೆ ಆಗಬಾರದು ಎಂದರೆ ಲೈಫ್‌ನಲ್ಲಿ ನಿರಂತರ ಪ್ರಯತ್ನ, ಶಿಸ್ತು ಹಾಗೂ ಕೆಲವೊಂದು ತಿನಿಸುಗಳನ್ನು ತಿನ್ನವುದು ಬಿಡಬೇಕು. ಸಣ್ಣಗೆ ಕಾಣಬೇಕು ಎಂದರೆ ನೀವು ಸಿಹಿಯಾದ ಪಾನೀಯಗಳು, ಮಾಲ್ಟ್ ಪಾನೀಯಗಳು ಹಾಗೂ ಆಲ್ಕೋಹಾಲ್‌ನಂತವುಗಳನ್ನು ಕುಡಿಯಬಾರದು. ಇವುಗಳಲ್ಲಿ ಹೆಚ್ಚುವರಿ ಕ್ಯಾಲೋರಿಗಳು ಇರುತ್ತವೆ. ಇವುಗಳಿಂದ ದೇಹದ ತೂಕ ಹೆಚ್ಚಾಗುತ್ತದೆ. ಇದರ ಬದಲಿಗೆ ನಿಂಬೆಹಣ್ಣು ಜೂಸ್, ಗ್ರೀನ್ ಟೀ, ನೀರನ್ನು ಕುಡಿಯಿರಿ. ಬ್ರೆಡ್, ಕರಿದ ತಿಂಡಿಗಳು, ಪಾನಿಪುರಿ, ಬಜ್ಜಿ, ಬೋಂಡಾ, ಅನ್ನ ಹಾಗೂ ಬೇಕರಿ ತಿನಿಸುಗಳು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಪ್ರೋಟಿನ್, ಹಸಿರು ತರಕಾರಿಗಳು ಮತ್ತು ಓಟ್ಸ್ ಸೇರಿದಂತೆ ತಿನ್ನಬೇಕು.
ಮಲಗುವುದಕ್ಕೂ ಮೊದಲು ಅಥವಾ ರಾತ್ರಿ ವೇಳೆ ಬಿಸ್ಕತ್ತು, ಜೂಸ್‌ನಂತವುಗಳನ್ನು ತೆಗೆದುಕೊಳ್ಳುವುದರಿಂದ ಕೊಬ್ಬು ಹೆಚ್ಚಾಗುತ್ತದೆ. ಇವುಗಳನ್ನು ತಿನ್ನುವ ಬದಲು ಇದೇ ಸಮಯಕ್ಕೆ ಊಟ ಮಾಡಿ. ಎಲ್ಲವೂ ಸರಿ ಹೋಗುತ್ತದೆ. ಪ್ರತಿ ಬಾರಿ ಊಟದ ನಂತರ ಲಿಫ್ಟ್ ಬದಲಿಸುವ ಬದಲು ಮೆಟ್ಟಿಲುಗಳನ್ನು ಬಳಸಿ. ಸ್ವಲ್ಪ ದೂರ ಹೋಗುವಾಗ ಬೈಕ್, ಕಾರು ಬಳಸುವ ಬದಲು ನಡೆದುಕೊಂಡು ಹೋಗಿ. ಸೈಕಲ್ ಬಳಸುವುದು ಉತ್ತಮ. ಹೀಗೆ ಮಾಡುವದರಿಂದ ದೇಹದಲ್ಲಿ ಕ್ಯಾಲೋರಿ ಕಡಿಮೆ ಅಗುತ್ತದೆ.
