ಉದಯವಾಹಿನಿ, ಬೆಂಗಳೂರು: ಹೆಬ್ಬಾಳ, ಯಲಹಂಕ ಭಾಗದಲ್ಲಿ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್ ಹಾಕುವ ಸಲುವಾಗಿ ಜಿಬಿಎ ಬಿಗ್ ಪ್ಲ್ಯಾನ್ ಮಾಡಿದೆ. ಮೂರು ಮಾದರಿಯಲ್ಲಿ ಪೇ & ಪಾರ್ಕಿಂಗ್ ಮಾಡಲು ಮುಂದಾಗಿದೆ. ಈಗಾಗಲೇ 18 ಕಡೆ ಜಾಗ ಗುರುತು ಮಾಡಿದ್ದು, ಮೂರು ಮಾದರಿಯ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತಿದೆ. ಜೊತೆಗೆ ಟೋಯಿಂಗ್ ಶುರುಗೆ ಪ್ಲಾನ್ ಮಾಡಲಾಗಿದೆ. ಟೋಯಿಂಗ್ ದರ ಕೂಡ ವಾಹನ ಸವಾರರಿಗೆ ದುಬಾರಿ ಆಗುವ ಸಾಧ್ಯತೆ ಹೆಚ್ಚಿದೆ.
ಬೆಂಗಳೂರಿನಲ್ಲೇ ಟ್ರಾಫಿಕ್ ಹಬ್ ಅಂದರೆ ಹೆಬ್ಬಾಳ ಏರ್‌ಪೋರ್ಟ್ ರಸ್ತೆ. ನಗರದ ಹೆಬ್ಬಾಳ, ಯಲಹಂಕ, ಏರ್‌ಪೋರ್ಟ್ ರಸ್ತೆಯಲ್ಲಿ ಸಂಚಾರ ದಟ್ಟಣೆ, ಟ್ರಾಫಿಕ್ ಸಮಸ್ಯೆ ನಿವಾರಿಸಲು ಜಿಬಿಎ ಬಿಗ್ ಪ್ಲ್ಯಾನ್ ಮಾಡುತ್ತಿದೆ. ಹೆಬ್ಬಾಳದ 10 ಕಡೆ, ಯಲಹಂಕದಲ್ಲಿ 8 ಕಡೆ ಪೇ ಅಂಡ್ ಪಾರ್ಕಿಂಗ್ ಮಾಡಲು ಮುಂದಾಗಿದೆ. ಮೂರು ಮಾದರಿಯ ಪೇ ಅಂಡ್ ಪಾರ್ಕಿಂಗ್‌ಗೆ ನಿರ್ಧರಿಸಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ.
ಮುಖ್ಯ ರಸ್ತೆಗಳ ಪಕ್ಕದಲ್ಲೆ ಪೇ ಅಂಡ್ ಪಾರ್ಕಿಂಗ್‌ಗೆ ಜಾಗ ಗುರುತಿಸಿ ಆನ್ ಸ್ಟ್ರೀಟ್ ಪಾರ್ಕಿಂಗ್ ಮಾಡಲು ಜಿಬಿಎ ಮುಂದಾಗಿದೆ. ಮುಖ್ಯ ರಸ್ತೆ ಹೊರತುಪಡಿಸಿ ಸರ್ಕಾರಿ ಕಛೇರಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ಮಾಡಿ ಆಫ್ ಸ್ಟ್ರೀಟ್ ಪಾರ್ಕಿಂಗ್ ಅಂತಾ ಮಾಡ್ತಿದೆ. ಮತ್ತೊಂದು ನೋ ಪಾರ್ಕಿಂಗ್ ಜಾಗದಲ್ಲಿ ಗಾಡಿ ಹಾಕಿದ್ರೆ ಟೋಯಿಂಗ್ ಮಾಡಲಾಗುತ್ತೆ. ಇದಕ್ಕಾಗಿ ಉತ್ತರ ನಗರ ಪಾಲಿಕೆ ಎರಡು ವೆಹಿಕಲ್ ಖರೀದಿ ಮಾಡಿದ್ದು, ಶೀಘ್ರದಲ್ಲೇ ಟೋಯಿಂಗ್ ಆರಂಭ ಆಗಲಿದೆ.
