
ಉದಯವಾಹಿನಿ ದೇವನಹಳ್ಳಿ: ದೇವನಹಳ್ಳಿ ಬಸ್ ನಿಲ್ದಾಣದಲ್ಲಿ ದೇವನಹಳ್ಳಿಯಿಂದ- ಗೋಖರೆ ಬಿನ್ನಮಂಗಲ ಗೇಟ್, ತಮ್ಮೇನಹಳ್ಳಿಗೇಟ್- ಮಟ್ಟಬಾರ್ಲಿ, ಬೊಮ್ಮನಹಳ್ಳಿಗೇಟ್- ಯಲಿಯೂಲಿಯೂರುಕ್ರಾಸ್, ಯಲಿಯೂರು, ಹಳಿಯೂರು, ದೊಡ್ಡತತ್ತಮಂಗಲ, ಚಿಕ್ಕತತ್ತಮಂಗಲ, ಗಡ್ಡದನಾಯಕನಹಳ್ಳಿ, ಮಂಡಿಬೆಲೆ ಈ ಸ್ಥಳಗಳಿಗೆ ಬಸ್ ಸೌಲಭ್ಯಕ್ಕೆ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್, ದೇವನಹಳ್ಳಿ ತಹಸೀಲ್ದಾರ್ ಶಿವರಾಜ್, ಮುಖಂಡರಾದ ಜಗನ್ನಾಥ್, ರಾಮಚಂದ್ರಪ್ಪ, ಬುವನಹಳ್ಳಿ ಮುನಿರಾಜಪ್ಪ, ಚನ್ನಹಳ್ಳಿ ರಾಜಣ್ಣ, ಪುರಸಭಾ ಸದಸ್ಯ ಮುನಿಕೃಷ್ಣ, ಶ್ರೀಧರ್, ಸೊಲೂರು ನಾಗರಾಜ್, ಕೆ ಎಸ್ ಆರ್ ಟಿ ಸಿ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
