ಉದಯವಾಹಿನಿ, ಛಿಂದ್ವಾರ್ (ಮಧ್ಯಪ್ರದೇಶ): ವಯಸ್ಸು ಎಂಬುದು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ತೋರಿಸಿದ್ದಾರೆ ಮಧ್ಯಪ್ರದೇಶದ ಛಿಂದ್ವಾರದ ಈ ವೇಟ್ ಲಿಫ್ಟರ್ಗಳು. 70 ಮತ್ತು 66ರ ವಯಸ್ಸಿನಲ್ಲೂ ಈ ಇಬ್ಬರು ಕುಸ್ತಿಪಟುಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಯುವಜನತೆಯನ್ನು ಬೆರಗುಗೊಳಿಸಿದ್ದಾರೆ.
ಚಿನ್ನದ ಪದಕ ವಿಜೇತರು: ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ ವರ್ಲ್ಡ್ ರಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್‌ನ ಆಶ್ರಯದಲ್ಲಿ ವಿಶ್ವ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಡೆದಿದ್ದು, ವಿಶ್ವ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ ವರ್ಲ್ಡ್ ರಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್‌ನ ಆಶ್ರಯದಲ್ಲಿ ನಡೆಯಿತು. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಇಬ್ಬರು ಕ್ರೀಡಾಪಟುಗಳಾದ ರಾಜೇಂದ್ರ ಸಿಂಗ್ ಠಾಕೂರ್ 70 ವರ್ಷ ವಯಸ್ಸಿನವರ 83 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸಂಜಯ್ ಚಾಟೆ 66 ವರ್ಷ ವಯಸ್ಸಿನವರ 64 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಬೆಂಚ್ ಪ್ರೆಸ್ ಮತ್ತು ಡೆಡ್‌ಲಿಫ್ಟ್ ಸ್ಪರ್ಧೆಗಳಲ್ಲಿ ತಲಾ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಅವರು ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಹಿರಿಯ ನಾಗರಿಕರ ವಿಭಾಗದಲ್ಲಿ ಈ ಸಾಧನೆ ಮಾಡಿದ ರಾಜೇಂದ್ರ ಮತ್ತು ಸಂಜಯ್ ವಿದೇಶಿ ನೆಲದಲ್ಲಿ ತಲಾ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸಿದ್ದಾರೆ.
ವಿಶ್ವ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದಿಂದ 35 ಕ್ರೀಡಾಪಟುಗಳು ಭಾಗವಹಿಸಿದ್ದರು. ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಿಂದ ಆಯ್ಕೆಯಾದ ರಾಜೇಂದ್ರ ಮತ್ತು ಸಂಜಯ್ ಇಬ್ಬರೂ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಈ ಕುರಿತು ಮಾತನಾಡಿದ ಸಂಜಯ್, ಚಿನ್ನದ ಪದಕ ಗೆದ್ದಾಗ ಮತ್ತು ಭಾರತೀಯ ರಾಷ್ಟ್ರೀಯ ಧ್ವಜದ ಮುಂದೆ ನಿಂತು, ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ಹೆಮ್ಮೆಯಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
