ಉದಯವಾಹಿನಿ, ಅಮರಾವತಿ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದ ಪತ್ನಿ ಶವದ ಪಕ್ಕದಲ್ಲೇ ಕುಳಿತು ರಾತ್ರಿಯಿಡೀ ಅಶ್ಲೀಲ ವೀಡಿಯೋ ವೀಕ್ಷಿಸಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಿಲುವೂರು ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಿ ಮಾಧುರಿ ಪತಿಯನ್ನು ಹತ್ಯೆಗೈದ ಪತ್ನಿ. ಲೋಕಂ ಶಿವ ನಾಗರಾಜು ಕೊಲೆಯಾದ ಪತಿ. ನಾಗರಾಜು ಈರುಳ್ಳಿ ವ್ಯಾಪಾರಿಯಾಗಿದ್ದ. ಅಕ್ರಮ ಸಂಬಂಧ ಹೊಂದಿದ್ದ ಲಕ್ಷ್ಮಿ ಮಾಧುರಿ ಬಿರಿಯಾನಿ ಮಾಡಿ ಅದರಲ್ಲಿ ಮತ್ತು ಬರಿಸುವ ಔಷಧಿ ಮಿಶ್ರಣ ಮಾಡಿ ಗಂಡನಿಗೆ ನೀಡಿದ್ದಳು. ಇದನ್ನು ತಿಂದ ಪತಿ ಗಾಢವಾದ ನಿದ್ರೆಗೆ ಜಾರಿದ್ದಾನೆ.
ರಾತ್ರಿ 11:30ರ ಸುಮಾರಿಗೆ, ಪ್ರಿಯಕರ ಗೋಪಿ ಮಾಧುರಿಯ ಮನೆಗೆ ಬಂದು ನಿದ್ದೆಯಲ್ಲಿದ್ದ ನಾಗರಾಜುವಿನ ಎದೆಯ ಮೇಲೆ ಕುಳಿತಿದ್ದಾನೆ. ಈ ವೇಳೆ ಮಾಧುರಿ ದಿಂಬಿನ ಸಹಾಯದಿಂದ ತನ್ನ ಪತಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಆತ ಸತ್ತಿದ್ದಾನೆ ಎಂದು ಖಚಿತಪಡಿಸಿಕೊಂಡ ಬಳಿಕ ಗೋಪಿ ಮಾಧುರಿಯನ್ನು ಅಲ್ಲೇ ಬಿಟ್ಟು ಅಲ್ಲಿಂದ ತೆರಳಿದ್ದಾನೆ. ಶವದ ಪಕ್ಕದಲ್ಲೇ ಕುಳಿತಿದ್ದ ಲಕ್ಷ್ಮಿ ಮಾಧುರಿ ರಾತ್ರಿಯೆಲ್ಲಾ ಅಶ್ಲೀಲ ವೀಡಿಯೋ ನೋಡಿಕೊಂಡು ಕಾಲಕಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
