ಉದಯವಾಹಿನಿ, ಆಂಧ್ರಪ್ರದೇಶ: ತಟಿಪರ್ತಿ ಸತೀಶ್ ರಾವ್.. ಉದ್ಯಮಶೀಲತೆಯ ಕನಸು ಕಾಣುವ ಯುವಜನರಿಗೆ ರಾವ್​ ಅವರ ಈ ಪಯಣ ಒಂದು ಪಾಠ.ಇವರಿಗೆ ಅಮೆರಿಕದಲ್ಲಿ 2.02 ಕೋಟಿ ರೂಪಾಯಿಯ ವಾರ್ಷಿಕ ವೇತನದ ಕೆಲಸವಿತ್ತು. ಆಳು, ಕಾಳು ಎಲ್ಲವೂ ಇತ್ತು. ಆದರೆ ಇವರ ಮನಸ್ಸು ಡೈರಿ ಉದ್ಯಮದ ಕಡೆ ಇತ್ತು.
ಇದಕ್ಕಾಗಿ ಅವರು ವಾರ್ಷಿಕ 2 ಕೋಟಿ ರೂಪಾಯಿಯ ಕೆಲಸಕ್ಕೆ ಗುಡ್​ ಬೈ ಹೇಳಿ ತಮ್ಮೂರಿಗೆ ಬಂದರು. ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಳ್ಳಲು ಹಳ್ಳಿಗೆ ಬಂದರು. ಸೌಕರ್ಯಗಳಿಗಿಂತ ತಮ್ಮ ಮನಸಿನ ಮಾತು ಕೇಳಿದರು. ತಮ್ಮ ನಿರ್ಣಯ ಮತ್ತು ಉದ್ದೇಶ ಮುಖ್ಯ ಎಂದು ಭಾವಿಸಿದರು. ಸತೀಶ್ ರಾವ್ ಮುಲುಗು ಜಿಲ್ಲೆಯ ವೆಂಕಟಾಪುರ ಮಂಡಲದ ವೆಲ್ತುರ್ಲಪಲ್ಲಿ ಗ್ರಾಮದವರಾಗಿದ್ದು, ಕೃಷಿ ಅವಲಂಬಿತ ಕುಟುಂಬದಿಂದ ಬಂದವರು. ಇವರು ಬಾಲ್ಯದಲ್ಲಿದ್ದಾಗ ಕಡಿಮೆ ಕೃಷಿ ಇಳುವರಿಯಿಂದಾಗಿ ಅವರ ಪೋಷಕರು ಭಾರಿ ನಷ್ಟವನ್ನು ಅನುಭವಿಸಿದ್ದರು. ಕಷ್ಟಗಳ ಹೊರತಾಗಿಯೂ, ಅವರು ತಮ್ಮ ಮೂವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದರು. ಸತೀಶ್ ಭೂಪಾಲಪಲ್ಲಿ ಜಿಲ್ಲೆಯ ಗಣಪುರಂ ಮಂಡಲ ಕೇಂದ್ರದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು, ಮುಳುಗು ಸರ್ಕಾರಿ ಪದವಿ ಕಾಲೇಜಿನಿಂದ ಪದವಿ ಪಡೆದರು ಮತ್ತು ನಂತರ NIT ವರಂಗಲ್‌ನಿಂದ MSc ಪಡೆದರು.

ಸ್ಕಾಲರ್​​ಶಿಪ್​ ಸಹಾಯದಿಂದ ಅಮೆರಿಕ ಸೇರಿದರು: ವಿದ್ಯಾರ್ಥಿವೇತನ ಪಡೆದ ಇವರು ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕ ಹೋದರು ಮತ್ತು ನಂತರ ಫಿಜರ್‌ನಲ್ಲಿ ಸಂಖ್ಯಾಶಾಸ್ತ್ರೀಯ ಪ್ರೋಗ್ರಾಮರ್ ಆಗಿ ಕೆಲಸಕ್ಕೆ ಸೇರಿದರು. ಆಗ ಇವರಿಗೆ ಆರಂಭಿಕ ಸಂಬಳ ರೂ. ವರ್ಷಕ್ಕೆ 85 ಲಕ್ಷ ರೂ.. ಅಲ್ಲಿ ಕೆಲಸ ಕಲಿತು ತಮ್ಮ ಕೌಶಲಗಳನ್ನು ಹೆಚ್ಚು ಮಾಡಿಕೊಂಡು, ಕಂಪನಿಗಳನ್ನು ಬದಲಾಯಿಸಿದರು… ಹೀಗಾಗಿ ಇವರ ಸಂಬಳ 85 ಲಕ್ಷದಿಂದ 2.02 ಕೋಟಿ ರೂ.ಗೆ ಏರಿತು. ಇಷ್ಟೆಲ್ಲ ಇದ್ದರೂ ಸತೀಶ್​ ಅವರಿಗೆ ಮಾತ್ರ ತೃಪ್ತಿ ಇರಲಿಲ್ಲ.

ಉದ್ಯೋಗ ಸೃಷ್ಟಿಯೇ ನನ್ನ ಬಾಲ್ಯದ ಕನಸಾಗಿತ್ತು: ಬಾಲ್ಯದಿಂದಲೂ, ನನ್ನ ಕನಸು ಇತರರಿಗಾಗಿ ಕೆಲಸ ಮಾಡುವುದಲ್ಲ, ಬದಲಾಗಿ ಜನರಿಗೆ ಉದ್ಯೋಗ ಸೃಷ್ಟಿಸುವುದು ಅಂತಾರೆ ಸತೀಶ್​.

ಅದೇ ಸಮಯದಲ್ಲಿ ಅವರ ಕುಟುಂಬವು ಹಳ್ಳಿಯಲ್ಲಿ ಸಾಮಾಜಿಕ ತೊಂದರೆಗಳನ್ನು ಎದುರಿಸಿತ್ತು. ಹೀಗಾಗಿ ಅವರು ಕೈತುಂಬಾ ಬರುತ್ತಿದ್ದ ಸಂಬಳದ ಕೆಲಸ ಬಿಟ್ಟು ಊರಿಗೆ ಬರಲು ನಿರ್ಧರಿಸಿದರು. ಹಣ ಮಾತ್ರ ಸ್ವಾಭಿಮಾನವನ್ನು ನೀಡಲು ಸಾಧ್ಯವಿಲ್ಲ. ನಾನು ನನ್ನ ಸ್ವಂತ ಹಳ್ಳಿಯಲ್ಲಿ ತಲೆ ಎತ್ತಿ ನಿಲ್ಲಲು ಬಯಸಿದ್ದೆ, ಹೀಗಾಗಿ ನನ್ನ ಕೆಲಸ ಬಿಟ್ಟು ಸ್ವಗ್ರಾಮ ಸೇರುವ ನಿರ್ಧಾರ ಮಾಡಿದೆ ಎನ್ನುವುದು ಸತೀಶ್​ ಅವರ ಮನದ ಮಾತು.

Leave a Reply

Your email address will not be published. Required fields are marked *

error: Content is protected !!