ಉದಯವಾಹಿನಿ, ಇಲ್ಲಿನ ವಸತಿ ಕಟ್ಟಡ ಮೇಲೆ ಫೈರಿಂಗ್ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟ ಕಮಲ್ ಆರ್ ಖಾನ್ ಅವರನ್ನು ಅರೆಸ್ಟ್ ಮಾಡಿದ್ದಾರೆ.ಜ.18ರಂದು ನಡೆದ ಗುಂಡಿನ ದಾಳಿಯಲ್ಲಿ ಪ್ರಮುಖ ಆರೋಪಿಯಾಗಿದ್ದ ನಟ ಕಮಲ್ ರಶೀದ್ ಖಾನ್ ಅವರನ್ನು ಜ.23ರಂದು ಸಂಜೆ ಪೊಲೀಸರು ಅರೆಸ್ಟ್ ಮಾಡಿದ್ದು, ಸದ್ಯ ಓಶಿವಾರ ಪೊಲೀಸರ ವಶದಲ್ಲಿದ್ದಾರೆ.
ಅಂಧೇರಿಯ ಓಶಿವಾರದಲ್ಲಿರುವ ನಳಂದ ಸೊಸೈಟಿಯಿಂದ ಎರಡು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಟ್ಟಡದ ಎರಡನೇ ಮತ್ತು ನಾಲ್ಕನೇ ಮಹಡಿಯಲ್ಲಿ ತಲಾ ಒಂದೊಂದು ಗುಂಡು ಪತ್ತೆಯಾಗಿದ್ದು, ಮಾಡೆಲ್, ಬರಹಗಾರ ಮತ್ತು ನಿರ್ದೇಶಕರಿಗೆ ಸೇರಿದ್ದ ಫ್ಲ್ಯಾಟ್‌ನಲ್ಲಿ ಸಿಕ್ಕಿದೆ. ವಿಚಾರಣೆ ವೇಳೆ ಕಮಲ್ ಖಾನ್ ಗುಂಡಿನ ದಾಳಿ ನಡೆಸಿರುವುದಾಗಿ ಒಪ್ಪಿಕೊಂಡಿದ್ದು, ಪರವಾನಗಿ ಪಡೆದ ಬಂದೂಕಿನಿಂದ ಶೂಟ್ ಮಾಡಿರುವುದಾಗಿ ತಿಳಿಸಿದ್ದಾರೆ.

ಈ ಪ್ರಕರಣವನ್ನು ಸಂಜಯ್ ಚವಾಣ್ ನೇತೃತ್ವದ ಓಶಿವಾರಾ ಪೊಲೀಸ್ ಠಾಣೆಯ 18 ಪೊಲೀಸರ ತಂಡ ಮತ್ತು ಕೆಲ ಅಪರಾಧ ವಿಭಾಗದ ತಂಡಗಳು ತನಿಖೆ ನಡೆಸಿದ್ದು, ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲಿಯೂ ಏನು ಪತ್ತೆಯಾಗಿರಲಿಲ್ಲ. ಬಳಿಕ ವಿಧಿವಿಜ್ಞಾನ ತಂಡದ ಸಹಾಯದಿಂದ ಕಮಲ್ ಆರ್ ಖಾನ್ ಅವರ ಬಂಗಲೆಯಿಂದ ಗುಂಡು ಹಾರಿಸಿರಬಹುದು ಎಂದು ಶಂಕಿಸಿದಾಗ ಸತ್ಯ ಬಯಲಾಗಿದೆ.

Leave a Reply

Your email address will not be published. Required fields are marked *

error: Content is protected !!