ಉದಯವಾಹಿನಿ, ಕನ್ನಡದ ಹಿರಿಯ ನಟ ಜಗ್ಗೇಶ್ ಅವರಿಗೆ ದೇವರ ಮೇಲೆ ಅಪಾರ ಭಕ್ತಿ. ಅದರಲ್ಲೂ ರಾಘವೇಂದ್ರಸ್ವಾಮಿ ಅಂದರೆ ಇನ್ನಿಲ್ಲದ ಪ್ರೀತಿ. ‘ರಣಧೀರ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ರವಿಚಂದ್ರನ್ ಅವರು ದೇವರಿಗೆ ಪೂಜೆ ಸಲ್ಲಿಸಲು ಧನ ಸಹಾಯ ಮಾಡಿದ ಪ್ರಸಂಗವೊಂದನ್ನು ಜಗ್ಗೇಶ್ ಅವರು ಮೆಲುಕು ಹಾಕಿದ್ದಾರೆ. ನಟ ಜಗ್ಗೇಶ್ ಅವರು ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘ನಾನು1986ರಲ್ಲಿ ಮೊದಲು ಮನೆ ಮಾಡಿದಾಗ ದೇವರ ಮನೆ ಇರಲಿಲ್ಲ. ಬಾಲ್ಯದಿಂದ ಅಮ್ಮನಿಂದ ಕಲಿತ ದೇವರ ಪೂಜೆ ಮುಂದುವರಿಸಲು ಮಲ್ಲೇಶ್ವರ 8ನೇ ಕ್ರಾಸ್ ನಲ್ಲಿ ₹40 ಕೊಟ್ಟು ಗಣಪ ಹಾಗೂ ರಾಯರ ಮಣ್ಣಿನ ವಿಗ್ರಹವನ್ನು ಕೊಂಡುಬಂದೆ. ಆದರೆ ಜಾಗದ ಅಭಾವದಿಂದ ಅಡುಗೆ ಮನೆಯ ಮೂಲೆಯಲ್ಲಿ ಮಣೆಯ ಮೇಲೆ ಅವುಗಳನ್ನು ಸ್ಥಾಪಿಸಿ ನನ್ನ ಪೂಜೆ ಆರಂಭಿಸಿ ಇಂದಿಗೆ 40 ವರ್ಷವಾಯಿತು’
“ಈ ವಿಗ್ರಹಗಳ ಮುಂದೆ ಅದೆಷ್ಟು ಕಣ್ಣೀರು ಹರಿಸಿ, ನಾನು ನನ್ನ ಕಾಲ ಮೇಲೆ ನಿಲ್ಲಲು ಬೇಡಿಕೊಂಡಿದ್ದೆ. ನನಗಾಗುತ್ತಿದ್ದ ಅದೆಷ್ಟು ಅವಮಾನಗಳನ್ನು ಈ ವಿಗ್ರಹಗಳಿಗೆ ಅರ್ಪಿಸುತ್ತಿದ್ದೆ. ನನಗೆ ದೇವರ ಮೇಲಿನ ನಂಬಿಕೆ ಅದೆಷ್ಟು ಗಾಢವಾಗಿತ್ತೆಂದರೆ, ನಾನು ಮಾಡಿದ ಉಪವಾಸ, ವ್ರತಗಳು, ಪೂಜೆ, ಏಕಾಂತ ಸೇವೆ ಈಗ ನೆನೆದರೂ ರೋಮಾಂಚನವಾಗುತ್ತದೆ’ ಎಂದಿದ್ದಾರೆ.
*40 ವರ್ಷದಿಂದ ಈ ಗಣಪನಿಗೆ ಗಣೇಶವ್ರತ ತಪ್ಪದೇ ಇಂದಿಗೂ ಮಾಡುವೆ. ಅದರಲ್ಲಿ ವಿಶೇಷ ವರ್ಷ ಎಂದರೆ 1987ರ ಚತುರ್ಥಿಯ ದಿನ. ಸಂಜೆ ‘ರಣಧೀರ’ ಚಿತ್ರೀಕರಣ ಮುಗಿದಮೇಲೆ ಬಂದು ಪೂಜೆ ಮಾಡುವ ಎಂದು ಹೋದೆ, ನೋಡಿದರೆ ಕೈಮ್ಯಾಕ್ಸ್ ಚಿತ್ರೀಕರಣ ರಾತ್ರಿ 2 ಗಂಟೆಯಾದರೂ ಮುಗಿಯುತ್ತಿಲ್ಲ. ಏನು ಮಾಡುವುದು ದೇವರೇ ಎಂದು ಮನಸ್ಸಿನಲ್ಲೇ ಕೊರಗುತ್ತಿದ್ದೆ. ರಾತ್ರಿ 2.40ಕ್ಕೆ ಶೂಟಿಂಗ್ ಏನೂ ಮುಗಿಯಿತು. ಆದರೆ, ಕೈಯಲ್ಲಿ ಬಿಡಿಗಾಸು ಇರಲಿಲ್ಲ
