ಉದಯವಾಹಿನಿ, ಪಾಲ್ಘರ್(ಮಹಾರಾಷ್ಟ್ರ): ಉದ್ಯಮ ಸ್ಥಾಪಿಸಲು ದೃಢ ಸಂಕಲ್ಪವಿದ್ದರೆ ವಯಸ್ಸು, ಶಿಕ್ಷಣ ಮತ್ತು ಅನುಭವವು ಯಾವುದೇ ಅಡೆತಡೆಗಳಾಗಲ್ಲ. ಒಂದು ಉದ್ಯಮದ ಯಶಸ್ಸು ಮೂರು-ಹಂತದ ವಿಧಾನ, ಹೊಸದನ್ನು ಸೃಷ್ಟಿಸುವ ಇಚ್ಛೆ ಮತ್ತು ಪರಿಸರ ಸ್ನೇಹಿಯಾಗಿರುವ ಉತ್ತಮ-ಗುಣಮಟ್ಟದ, ಉತ್ತಮ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಬದ್ಧತೆಯನ್ನು ಅವಲಂಬಿಸಿರುತ್ತದೆ.
ಹೌದು, ಪಾಲ್ಘರ್​ ಜಿಲ್ಲೆಯ ದಹಾನು ತಾಲೂಕಿನ ಘೋಲ್ವಾಡ್‌ ಗ್ರಾಮದ 60 ವರ್ಷದ ವಿಶ್ವಾಸ್ ನೆರೂರ್ಕರ್ ಹೊಸ ಜೇನು ಉತ್ಪಾದನಾ ಉದ್ಯಮವನ್ನು ಪ್ರಾರಂಭಿಸುವ ಮೂಲಕ ಮಾದರಿ ಆಗಿದ್ದಾರೆ. ಪಾಲ್ಘರ್ ಜಿಲ್ಲೆಯ ದಹಾನು ತಾಲೂಕಿನ ಘೋಲ್ವಾಡ್, ಮಹಾರಾಷ್ಟ್ರ ಸರ್ಕಾರವು ಘೋಷಿಸಿದ ಮೂರನೇ ‘ಜೇನು ಗ್ರಾಮ’ವಾಗಿದೆ. ಈ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಉದ್ಯಮದಲ್ಲಿ ಯಶಸ್ವಿಯಾಗಿ ಮೇಲೆರುತ್ತಾ, ನೆರೂರ್ಕರ್ ಜೇನುತುಪ್ಪದ ಉದ್ಯಮವನ್ನು ಶುರು ಮಾಡಿದರು. ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು ಮತ್ತು ಅವರ ಆದಾಯವನ್ನು ಹೆಚ್ಚಿಸುವುದು ನೆರೂರ್ಕರ್ ಅವರ ಗುರಿಯಾಗಿದೆ.

ಗುಣಮಟ್ಟವೇ ಯಶಸ್ವಿ ಉದ್ಯಮದ ಸೂತ್ರ: ‘ಜೇನುತುಪ್ಪ’ದ ವ್ಯವಹಾರವು ಪ್ರಕೃತಿಯಿಂದ ತೆಗೆದುಕೊಂಡು ನೈಸರ್ಗಿಕ ರೀತಿಯಲ್ಲಿ ಮಾನವೀಯತೆಗೆ ಹಿಂದಿರುಗಿಸುವ ದೃಢಸಂಕಲ್ಪದಿಂದ ಹುಟ್ಟಿಕೊಂಡಿದೆ. ಇಂದು, ಈ ಉದ್ಯಮವು ಕೇವಲ 100 ಪ್ರತಿಶತವಲ್ಲ, ಆದರೆ 101 ಪ್ರತಿಶತ ಗುಣಮಟ್ಟವನ್ನು ಖಾತರಿಪಡಿಸುತ್ತದೆ. ಗುಣಮಟ್ಟ ಮತ್ತು ನೈಸರ್ಗಿಕತೆಯೇ ಅವರ ಯಶಸ್ಸಿನ ಹಿಂದಿರುವ ಸೂತ್ರವಾಗಿದೆ. ವಿಶ್ವಾಸ್ ನೆರೂರ್ಕರ್ 12ನೇ ತರಗತಿಯವರೆಗೆ ಓದಿದ್ದರು. ಅವರಿಗೆ ಕೆಲಸದಲ್ಲಿ ಆಸಕ್ತಿ ಇರಲಿಲ್ಲ, ಹಾಗಾಗಿ ಕೆಲ ಕಾಲ ವಿದ್ಯುತ್ ಇಲಾಖೆಗೆ ಸಂಬಂಧಿಸಿದ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಜನರ ಆರೋಗ್ಯದ ಬಗ್ಗೆ ಅವರ ಕಾಳಜಿ ಅವರನ್ನು ವಿರಮಿಸಲು ಬಿಡಲಿಲ್ಲ. ನೆರೂರ್ಕರ್​ ಯಾವುದೇ ಕಲಬೆರಕೆಯನ್ನು ಸಹಿಸುವುದಿಲ್ಲ. ಹಾಗಾಗಿ ಅವರು ಪ್ರಕೃತಿಯೊಂದಿಗೆ ರಾಜಿ ಮಾಡಿಕೊಳ್ಳದೆ 100 ಪ್ರತಿಶತ ಪರಿಸರ ಸ್ನೇಹಿ ಜೇನುತುಪ್ಪವನ್ನು ಉತ್ಪಾದಿಸಲು ನಿರ್ಧರಿಸಿದರು. ಈ ನಿಟ್ಟಿನಲ್ಲಿ ದಹಾನು ತಾಲೂಕಿನ ಕೊಸ್ಬಾದ್‌ನಲ್ಲಿ ಜೇನುಸಾಕಣೆ ತರಬೇತಿಯನ್ನು ಪಡೆದರು. ಅದರ ನಂತರ, ಅವರು ಜೇನುತುಪ್ಪವನ್ನು ಉತ್ಪಾದಿಸಲು ನಿರ್ಧರಿಸಿದರು.

Leave a Reply

Your email address will not be published. Required fields are marked *

error: Content is protected !!