ಉದಯವಾಹಿನಿ, ಅರುಣ್ ರಾಮ್ ಪ್ರಸಾದ್ ನಟನೆಯ ‘ಘಾರ್ಗಾ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಹಾರರ್, ಸಸ್ಪೆನ್ಸ್, ಥಿಲ್ಲರ್‌ನಿಂದ ಕೂಡಿದ ಟ್ರೈಲರ್ ಸಿನಿ ರಸಿಕರನ್ನ ಅಚ್ಚರಿಗೊಳಿಸಿದೆ. ಹೌದು. `ಜೋಗಿ’, `ಪ್ರೀತಿ ಏಕೆ ಭೂಮಿ’ ಮೇಲಿದೆ ಮೊದಲಾದ ಚಿತ್ರಗಳ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣದ ಬಹುನಿರೀಕ್ಷಿತ `ಘಾರ್ಗಾ’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಒರಾಯನ್ ಮಾಲ್ ಆವರಣದಲ್ಲಿ ನೆರವೇರಿತು. ಅವರ ಪುತ್ರ ಅರುಣ್ ರಾಮ್‌ಪ್ರಸಾದ್ ಈ ಚಿತ್ರದ ನಾಯಕನಾಗಿ ಸಿನಿ ರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ʻಫಾರ್ಗಾʼ ಒಂದು ಊರಿನ ಹೆಸರಾಗಿದ್ದು, ʻದಿ ಲ್ಯಾಂಡ್ ಆಫ್ ಶಾಡೋʼ ಎಂಬ ಅಡಿಬರಹ ಚಿತ್ರಕ್ಕಿದೆ.
ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್ ಹಾಗೂ ನಾಯಕಿ ಪಾತ್ರದಲ್ಲಿ ರೆಹಾನ ಅಭಿನಯಿಸಿದ್ದಾರೆ. ಎಂ. ಶಶಿಧರ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಆ ವೇದಿಕೆಯಲ್ಲಿ ಪೊಲೀಸ್ ಸ್ಟೋರಿ ಚಿತ್ರದ ಡೈಲಾಗ್ ಹೇಳಿದ ಸಾಯಿ ಕುಮಾರ್ ಅವರ ಅಪ್ಟಟ ಅಭಿಮಾನಿಯ ಕೈಲಿ ಚಿತ್ರದ ಟ್ರೈಲರ್ ರಿಲೀಸ್ ಮಾಡಿಸಲಾಯಿತು.
