ಉದಯವಾಹಿನಿ, ಪ್ಯಾರಿಸ್: ಮೆಡಿಟರೇನಿಯನ್ ಸಮುದ್ರದಲ್ಲಿ ಫ್ರಾನ್ಸ್ ವಶಕ್ಕೆ ಪಡೆದಿದ್ದ ರಶ್ಯದ ಶಂಕಿತ ಛಾಯಾ ತೈಲ ಟ್ಯಾಂಕರ್ ‘ಗ್ರಿಂಚ್’ನ ಭಾರತೀಯ ಕ್ಯಾಪ್ಟನ್‌ನ್ನು ಅಧಿಕಾರಿಗಳು ಕಸ್ಟಡಿಗೆ ಪಡೆದಿರುವುದಾಗಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಛಾಯಾ ಟ್ಯಾಂಕರ್ ಪಡೆಯು ನಿರ್ಬಂಧಗಳನ್ನು ತಪ್ಪಿಸಲು ರಶ್ಯಾದಿಂದ ನಿರ್ವಹಿಸಲ್ಪಡುವ ನೂರಾರು ಹಡಗುಗಳ ರಹಸ್ಯ ಜಾಲವಾಗಿದೆ. ದಕ್ಷಿಣ ಫ್ರಾನ್ಸ್‌ನ ಮಾರ್ಸೆಲ್ಲೆ ಬಂದರು ಬಳಿ ವಶಕ್ಕೆ ಪಡೆದಿದ್ದ ಟ್ಯಾಂಕರ್ ರಾಷ್ಟ್ರಧ್ವಜವನ್ನು ಸಾಬೀತುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಕ್ಯಾಪ್ಟನ್‌ನ್ನು ಕಸ್ಟಡಿಗೆ ಪಡೆಯಲಾಗಿದೆ. ಉಳಿದ ಸಿಬ್ಬಂದಿಗಳು ಟ್ಯಾಂಕರ್‌ನಲ್ಲಿಯೇ ಇದ್ದಾರೆ. ಹಡಗನ್ನು ಈಗ ಮಾರ್ಸೆಲ್ಲೆ ಬಂದರಿನಲ್ಲಿ ಕಾವಲು ಕಾಯಲಾಗುತ್ತಿದೆ ಎಂದು ವರದಿ ಹೇಳಿದೆ.
