ಉದಯವಾಹಿನಿ, ನವದೆಹಲಿ,
: ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾವು ಈಸ್ಟ್ ಇಂಡಿಯಾ ಕಂಪನಿಯೆಂದು ಟೀಕಾ ಪ್ರಹಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಇಂಡಿಯಾ ಪದವು ಇಂಡಿಯನ್ ಮುಜಾಯಿದ್ ದ ಉಗ್ರಗಾಮಿ ಸಂಘಟನೆ ಹೆಸರಿನಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿಯವರು, ಪ್ರತಿಪಕ್ಷಗಳು ನಮ್ಮ ವಿರುದ್ಧ ಇಂಡಿಯಾ ಹೆಸರಿನಲ್ಲಿ ಮೈತ್ರಿ ಮಾಡಿಕೊಂಡಿವೆ. ವಾಸ್ತವವಾಗಿ ಈಸ್ಟ್ ಇಂಡಿಯಾ ಕಂಪನಿಯ ಮತ್ತೊಂದು ಮುಖ ಎಂದು ಟೀಕಾಪ್ರಹಾರ ನಡೆಸಿದರು.
ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಇಂಡಿಯನ್ ಮಜಾಯಿದ್ ಹೆಸರಿನಲ್ಲೂ ಇಂಡಿಯನ್ ಎಂಬ ಪದವಿದೆ, ಹಾಗಾದರೆ ಆ ಸಂಘಟನೆಗೂ, ಈ ಮೈತ್ರಿಕೂಟಕ್ಕೂ ಸಾಮ್ಯತೆ ಇದೆಯೇ ಎಂದು ಪ್ರಶ್ನಿಸಿದರು. ಪ್ರತಿಪಕ್ಷಗಳ ಮೈತ್ರಿಕೂಟ ಗೊತ್ತು ಗುರಿ ಇಲ್ಲದೆ ಕೇವಲ ಒಂದು ರಾಜಕೀಯ ಪಕ್ಷವನ್ನು ಸೋಲಿಸುವುದಕ್ಕಾಗಿ ಮಾಡಿಕೊಂಡಿರುವ ವ್ಯವಸ್ಥೆ, ಪ್ರತಿಪಕ್ಷಗಳು ಸಂಪೂರ್ಣವಾಗಿ ಹತಾಶೆಯಾಗಿವೆ. ಸ್ವತಂತ್ರ್ಯ ಪೂರ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿ ಸಹ ಭಾರತದ ಹೆಸರನ್ನು ಬಳಸಿಕೊಂಡಿದೆ. ಇಂಡಿಯನ್ ಮುಜಾಯಿದ್ದೀನ್ ಸಂಘಟನೆಯು ಕೂಡ ಹೆಸರು ಬಳಸಿಕೊಂಡಿದೆ.
ಕೇವಲ ಇಂಡಿಯಾ ಎಂದು ಹೆಸರಿಟ್ಟುಕೊಂಡರೆ ಜನ ನಂಬುವುದಿಲ್ಲ. ಅದು ನಿಮಗೆ ಮತ ತಂದುಕೊಡುತ್ತದೆ ಎಂಬ ಭ್ರಮೆಯಲ್ಲಿದ್ದರೆ ಬಿಟ್ಟುಬಿಡಿ. ನಿಮ್ಮ ಹತಾಶೆ ನೋಡಿದರೆ ನಮಗೆ ಮರುಕ ಬರುತ್ತದೆ ಎಂದು ವ್ಯಂಗ್ಯವಾಡಿದರು.
