ಉದಯವಾಹಿನಿ , ನವದೆಹಲಿ: ಪ್ರಸಿದ್ಧ ಅಥ್ಲೀಟ್, ರಾಜ್ಯಸಭಾ ಸದಸ್ಯೆ ಮತ್ತು ಭಾರತೀಯ ಒಲಿಂಪಿಕ್ ಸಂಘದ ಅಧ್ಯಕ್ಷೆ ಪಿಟಿ ಉಷಾ ಅವರ ಪತಿ ವಿ. ಶ್ರೀನಿವಾಸನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪಿಟಿ ಉಷಾ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಸಂತಾಪ ಸೂಚಿಸಿದರು. ದೇಶಾದ್ಯಂತ ಕ್ರೀಡಾ ಮತ್ತು ರಾಜಕೀಯ ವಲಯದಿಂದ ವಿ.ಶ್ರೀನಿವಾಸನ್ ಅವರ ನಿಧನಕ್ಕೆ ಸಂತಾಪ ವ್ಯಕ್ತವಾಗಿದೆ.
ಶ್ರೀನಿವಾಸನ್ ಕೊಚ್ಚಿಯಲ್ಲಿರುವ ತಮ್ಮ ಮನೆಯಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದರು. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಪ್ರಯತ್ನದ ಬಳಿಕವೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಹೃದಯಾಘಾತದಿಂದ ಆಗಿರಬಹುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶ್ರೀನಿವಾಸನ್ ಅವರು ಮಾಜಿ ಕೇಂದ್ರ ಸರ್ಕಾರಿ ನೌಕರರಾಗಿದ್ದರು. ಪಿಟಿ ಉಷಾ ಅವರ ದೀರ್ಘಕಾಲದ ಅಥ್ಲೆಟಿಕ್ ವೃತ್ತಿ, ಒಲಿಂಪಿಕ್ ಸಾಧನೆಗಳು, ಕ್ರೀಡಾ ಆಡಳಿತ ಮತ್ತು ರಾಜಕೀಯ ಪ್ರವೇಶದಲ್ಲಿ ಅವರು ಬೆಂಬಲವಾಗಿ ನಿಂತಿದ್ದರು. ಅವರನ್ನು ಉಷಾ ಅವರ `ರಾಕ್’ ಮತ್ತು ಪ್ರೇರಣಾಮೂಲ ಎಂದು ವ್ಯಾಪಕವಾಗಿ ಗೌರವಿಸಲಾಗುತ್ತಿತ್ತು.
