ಉದಯವಾಹಿನಿ , ಮುಂಬೈ: ಅಜಿತ್ ಪವಾರ್ ಅವರ ಅಕಾಲಿಕ ಮರಣದ ನಂತರ ಎನ್‌ಸಿಪಿಯ ಭವಿಷ್ಯಕ್ಕಾಗಿ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಬೇಕು ಎಂದು ಕೆಲವು ನಾಯಕರು ಆಗ್ರಹಿಸಿದ್ದಾರೆ. ನಾವು ಅದರ ಬಗ್ಗೆ ನಮ್ಮ ನಾಯಕತ್ವದೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅಜಿತ್ ಪವಾರ್ ಅವರ ಆಪ್ತರಾಗಿದ್ದ ಜಿರ್ವಾಲ್ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ಸುನೇತ್ರಾ ಪವಾರ್, ಎನ್‌ಸಿಪಿ ಅಜಿತ್ ಪವಾರ್ ಗುಂಪನ್ನು ಮುನ್ನಡೆಸಬೇಕು. ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಜನರ ಆಶಯವಾಗಿದೆ ಎಂದು ಹಿರಿಯ ಎನ್‌ಸಿಪಿ ನಾಯಕ ಮತ್ತು ಸಚಿವ ನರಹರಿ ಜಿರ್ವಾಲ್ ತಿಳಿಸಿದ್ದಾರೆ.
ಈ ನಡುವೆ ಅಜಿತ್ ಪವಾರ್ ನಿಭಾಯಿಸುತ್ತಿದ್ದ ಖಾತೆಗಳ ಮೇಲೆ ಕಣ್ಣಿಟ್ಟಿರುವ ಪಕ್ಷದ ನಾಯಕರು, ಅಜಿತ್ ಪವಾರ್ ಅವರ ಖಾತೆಗಳನ್ನು ಪಕ್ಷದ ಕೋಟಾದಡಿಯಲ್ಲಿ ಬರುವುದರಿಂದ ಅವುಗಳನ್ನು ಎನ್‌ಸಿಪಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರವನ್ನು ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
