ಉದಯವಾಹಿನಿ , ಬ್ರಸೆಲ್ಸ್ : ಪ್ರತಿಭಟನಾಕಾರರ ಮೇಲೆ ಹಿಂಸಾತ್ಮಕ ದಮನದಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಯುರೋಪಿಯನ್ ಯೂನಿಯನ್(ಇಯು) ವಿದೇಶಾಂಗ ಸಚಿವರು ಗುರುವಾರ ಇರಾನಿನ ಮೇಲೆ ಹೊಸ ನಿರ್ಬಂಧಗಳನ್ನು ಅನುಮೋದಿಸಿರುವುದಾಗಿ ರಾಜತಾಂತ್ರಿಕ ಮೂಲಗಳು ಹೇಳಿವೆ.
ರಾಯರ್ಸ್ ವರದಿಯ ಪ್ರಕಾರ, ಸಚಿವರು ಇರಾನಿನ `ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್(ಐಆಕ್ಟಿಸಿ) ಅನ್ನು ಯುರೋಪಿಯನ್ ಯೂನಿಯನ್‌ನ ಭಯೋತ್ಪಾದಕ ಸಂಸ್ಥೆಗಳ’ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಸಹಮತಕ್ಕೆ ಬರುವ ನಿರೀಕ್ಷೆಯಿದೆ. ದೀರ್ಘಕಾಲದಿಂದ ಈ ಪ್ರಸ್ತಾಪವನ್ನು ವಿರೋಧಿಸುತ್ತಾ ಬಂದಿದ್ದ ಫ್ರಾನ್ಸ್ ಸಹಿತ ಕೆಲವು ಸದಸ್ಯರು ಇದೀಗ ಈ ಕ್ರಮವನ್ನು ಬೆಂಬಲಿಸುವುದಾಗಿ ಘೋಷಿಸಿವೆ. ಇಂತಹ ನಿರ್ಧಾರಗಳಿಗೆ ಯುರೋಪಿಯನ್ ಯೂನಿಯನ್ ಬಣದ 27 ಸದಸ್ಯರಲ್ಲಿ ಸರ್ವಾನುಮತದ ಅಗತ್ಯವಿದೆ. 1979ರಲ್ಲಿ ಸ್ಥಾಪನೆಯಾದ ಐಆಕ್ಟಿಸಿ ದೇಶದಲ್ಲಿ ದೊಡ್ಡ ಹಿಡಿತವನ್ನು ಹೊಂದಿದ್ದು ಆರ್ಥಿಕತೆ ಮತ್ತು ಸಶಸ್ತ್ರ ಪಡೆಗಳನ್ನು ನಿಯಂತ್ರಿಸುತ್ತದೆ. ಮತ್ತು ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಪರಮಾಣ ಕಾರ್ಯಕ್ರಮಗಳ ಉಸ್ತುವಾರಿಯನ್ನೂ ವಹಿಸಿದೆ.
