ಉದಯವಾಹಿನಿ, ದೋಸೆ, ಇಡ್ಲಿ ಎಲ್ಲವನ್ನು ಮಕ್ಕಳು ಎಷ್ಟ ಪಟ್ಟು ತಿಂದ್ರೂ ಪಡ್ಡು ಅಂದ್ರೆ ಹಲವರಿಗೆ ಫೇವರೇಟ್‌. ಬೆಳಗ್ಗೆ ತಿಂಡಿಗೆ ಏನು ಮಾಡೋಣ ಎಂದು ಯೋಚಿಸುವವರಿಗೆ ರವೆ ಪಡ್ಡು ಒಂದು ಅತ್ಯುತ್ತಮ ಆಯ್ಕೆ. ಕಾವಲಿಯಲ್ಲಿ ಮಾಡುವ ಈ ಪಡ್ಡು ಬಹಳ ಸುಲಭವಾಗಿ ತಯಾರಾಗುತ್ತದೆ ಮತ್ತು ಬಿಸಿ ಬಿಸಿಯಾಗಿ ತಿನ್ನುವಾಗ ಬಾಯಿಗೆ ರುಚಿ ರುಚಿಯಾಗಿ ಬರುತ್ತದೆ. ಮಕ್ಕಳಿಗೆ ಇದನ್ನು ಚಟ್ನಿಯೊಂದಿಗೆ ಕೊಟ್ಟರೆ ಬಾಯಿ ಚಪ್ಪರಿಸಿ ತಿನ್ನುತ್ತಾರೆ.
ಈ ರವೆ ಪಡ್ಡು ಬೆಳಗ್ಗೆ ತಿಂಡಿಗಷ್ಟೇ ಅಲ್ಲ, ಮಧ್ಯಾಹ್ನದ ಟಿಫಿನ್ ಬಾಕ್ಸ್‌ಗೂ ಇದು ಉತ್ತಮ ಆಯ್ಕೆಯಾಗಿದೆ. ರವೆಯಿಂದ ಮಾಡುವ ಪಡ್ಡು ದೋಸೆ
ಪ್ರತಿನಿತ್ಯ ರೈಸ್‌‌ ಪದಾರ್ಥಗಳು ತಿಂದು ಬೋರ್‌ ಆಗಿರುತ್ತೆ ಅನ್ನೋದಾದ್ರೆ ಈ ರವೆ ಪಡ್ಡು ಅತ್ಯುತ್ತಮ ಆಯ್ಕೆ. ನೀವು ಈ ರವೆ ಪಡ್ಡುವನ್ನು ಒಮ್ಮೆ ಮನೆಯಲ್ಲಿ ಮಾಡಿದರೆ ಆಯ್ತು, ಇದರ ರುಚಿ ಮತ್ತೆಂದು ಮರೆಯಲ್ಲ. ಇದನ್ನು ಮನೆಯಲ್ಲಿ ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಮಾಡಬಹುದು. ಹಾಗಾದ್ರೆ ಈ ರವೆ ಪಡ್ಡು ಮಾಡೋದು ಹೇಗೆ? ಈಗ ರವೆ ಪಡ್ಡು ಮಾಡುವ ವಸ್ತುಗಳು ಮತ್ತು ವಿಧಾನವನ್ನು ನೋಡೋಣ.

ರವೆ ಪಡ್ಡುಗೆ ಬೇಕಾದ ಸಾಮಾಗ್ರಿಗಳು!
ರವೆ – 2 ಕಪ್
ಈರುಳ್ಳಿ – 1 ದೊಡ್ಡದು (ಸಣ್ಣದಾಗಿ ಹೆಚ್ಚಿದ್ದು)
ಕ್ಯಾರೆಟ್ – 1 (ತುರಿದುಕೊಂಡದ್ದು)
ತೆಂಗಿನಕಾಯಿ ತುರಿ – ½ ಕಪ್
ಕೊತ್ತಂಬರಿ ಸೊಪ್ಪು – ಒಂದು ಕೈಪಿಡಿ (ಸಣ್ಣದಾಗಿ ಹೆಚ್ಚಿದ್ದು)
ಹಸಿ ಮೆಣಸಿನಕಾಯಿ – 2-3 (ಸಣ್ಣದಾಗಿ ಹೆಚ್ಚಿದ್ದು)
ಮೊಸರು – ¾ ಕಪ್
ಅಡುಗೆ ಸೋಡಾ – ಚಿಟಿಕೆಯಷ್ಟು
ಅರಶಿಣ – ಚಿಟಿಕೆಯಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – ಕಾವಲಿಗೆ ಹಾಕಲು

Leave a Reply

Your email address will not be published. Required fields are marked *

error: Content is protected !!