ಉದಯವಾಹಿನಿ, ಬೆಳಗಿನ ತಿಂಡಿಯ ಸಂದರ್ಭ ಉಪ್ಪಿಟ್ಟು ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿರುವ ಆಹಾರವಾಗಿದೆ.! ಯಾಕಂದರೆ, ತಯಾರಿಸಲು ಸುಲಭ, ಸಮಯ ಕಡಿಮೆ ಮತ್ತು ಹೊಟ್ಟೆ ತುಂಬಿಸುವ ಗುಣ ಎನ್ನುವುದು. ಆದರೆ ಹಲವರಿಗೆ ಉಪ್ಪಿಟ್ಟು ಅಂದರೆ ರುಚಿಯಲ್ಲಿ ಏನೋ ಕೊರತೆ ಎನ್ನಿಸುವುದು ಸಹಜ.? ಅದೇ ಕಾರಣಕ್ಕೆ ಮಕ್ಕಳು ಮತ್ತು ಕೆಲವರು ಉಪ್ಪಿಟ್ಟನ್ನು ಇಷ್ಟಪಡದೇ ಇರುತ್ತಾರೆ. ಆದರೆ ಕೆಲವು ಸಣ್ಣ ಬದಲಾವಣೆಗಳು ಮತ್ತು ಹೆಚ್ಚುವರಿ ಪದಾರ್ಥಗಳನ್ನು ಸೇರಿಸಿದರೆ, ಇದೇ ಉಪ್ಪಿಟ್ಟು ಹೋಟೆಲ್ ರುಚಿಗೂ ಮೀರಿಸುವಂತೆ ತಯಾರಿಸಬಹುದು ಎನ್ನುವುದು ಗೊತ್ತಾ? ಇಲ್ಲಿದೆ ನೋಡಿ ಆ ರುಚಿಕರವಾದ ಟೇಸ್ಟೀ ವಿಧಾನ:
ಉಪ್ಪಿಟ್ಟಿನ ಮೂಲ ಪದಾರ್ಥಗಳು:
ಉಪ್ಪಿಟ್ಟು ಮಾಡಲು ಸಾಮಾನ್ಯವಾಗಿ ರವೆ, ಈರುಳ್ಳಿ, ಟೊಮ್ಯಾಟೋ, ಹಸಿಮೆಣಸಿನಕಾಯಿ, ಕರಿಬೇವು, ಸಾಸಿವೆ, ಜೀರಿಗೆ, ಎಣ್ಣೆ ಮತ್ತು ಉಪ್ಪು ಬಳಸಲಾಗುತ್ತದೆ. ಈ ಪದಾರ್ಥಗಳ ಸಮತೋಲನವೇ ಉಪ್ಪಿಟ್ಟಿನ ಮೂಲ ರುಚಿಯನ್ನು ನಿರ್ಧರಿಸುತ್ತದೆ. ಆದರೆ ಇದರ ಜೊತೆಗೆ ಕೆಲವು ವಿಶೇಷ ಪದಾರ್ಥಗಳನ್ನು ಸೇರಿಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.
ಬೆಲ್ಲ ಅಥವಾ ಸಕ್ಕರೆಯ ಸಣ್ಣ ಸ್ಪರ್ಶ:
ಉಪ್ಪಿಟ್ಟು ಒಗ್ಗರಣೆಯಲ್ಲಿ ನೀರು ಹಾಕಿದ ನಂತರ ಸ್ವಲ್ಪ ಬೆಲ್ಲ ಸೇರಿಸಿದರೆ ರುಚಿಗೆ ವಿಭಿನ್ನ ಸೊಗಸು ಬರುತ್ತದೆ. ದಪ್ಪ ರವೆ ಬಳಕೆ ಮಾಡುತ್ತಿದ್ದರೆ ಬೆಲ್ಲ ಉತ್ತಮ ಆಯ್ಕೆ. ಸಣ್ಣ ರವೆ ಬಳಸಿದರೆ ಸ್ವಲ್ಪ ಸಕ್ಕರೆ ಸೇರಿಸಬಹುದು. ಇದರಿಂದ ಉಪ್ಪು ಮತ್ತು ಕಾರದ ರುಚಿಗೆ ಸಮತೋಲನ ಸಿಗುತ್ತದೆ.

ಕಡಲೆಬೀಜ ಮತ್ತು ಬೇಳೆಗಳ ಪಾತ್ರ: ಉಪ್ಪಿಟ್ಟಿನಲ್ಲಿ ಕಡಲೆಬೀಜ ಸೇರಿಸುವುದು ಸಾಮಾನ್ಯ. ಆದರೆ ಅತಿಯಾಗಿ ಬಳಸದೆ, ಎಣಿಕೆಯಷ್ಟು ಮಾತ್ರ ಬಳಸಿದರೆ ರುಚಿ ಚೆನ್ನಾಗಿರುತ್ತದೆ. ಜೊತೆಗೆ ಒಗ್ಗರಣೆಯಲ್ಲಿ ಕಡಲೆ ಬೇಳೆ ಮತ್ತು ಉದ್ದಿನ ಬೇಳೆ ಸೇರಿಸಿದರೆ ಕರಕರೆತನ ಮತ್ತು ಪೌಷ್ಟಿಕತೆ ಹೆಚ್ಚುತ್ತದೆ.

Leave a Reply

Your email address will not be published. Required fields are marked *

error: Content is protected !!