ಉದಯವಾಹಿನಿ, ನಮ್ಮಲ್ಲಿ ಅನೇಕ ಜನರಿಗೆ ಮಾಂಸಾಹಾರ ಎಂದರೆ ತುಂಬಾನೇ ಇಷ್ಟವಿರುತ್ತದೆ, ಅದರಲ್ಲೂ ಚಿಕನ್‌ಗಿಂತಲೂ ಹೆಚ್ಚು ಮಟನ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ. ಮಟನ್ ಅಂತ ಹೇಳಿದರೆ ಕೆಲವರಿಗೆ ಮಟನ್ ಕೀಮಾ ಎಂದರೆ ಪಂಚಪ್ರಾಣ. ಇದೊಂದು ಇದ್ದರೆ ಸಾಕು, ಅವರಿಗೆ ಬೇರೆ ಊಟವೇ ಬೇಕಾಗುವುದಿಲ್ಲ ಅನ್ನೋವಷ್ಟರ ಮಟ್ಟಿಗೆ ಅವರಿಗೆ ಇದು ಇಷ್ಟವಾಗಿರುತ್ತದೆ.
ಕೆಲವರು ಮಟನ್ ಕೀಮಾವನ್ನು ರೋಟಿ ಅಥವಾ ಚಪಾತಿಯ ಜೊತೆ ಹಚ್ಚಿಕೊಂಡು ತಿಂದರೆ, ಇನ್ನೂ ಕೆಲವರು ಅದನ್ನ ಬಿಳಿ ಅನ್ನದ ಜೊತೆಗೆ ಜೋಡಿಸಿಕೊಂಡು ತಿನ್ನಲು ಹೆಚ್ಚು ಇಷ್ಟಪಡುತ್ತಿರುತ್ತಾರೆ ಅಂತ ಹೇಳಬಹುದು. ಇಲ್ಲಿ ಇಂತಹದೇ ಇನ್ನೊಂದು ಆಯ್ಕೆ ಇದೆ ನೋಡಿ. ಈ ಆಯ್ಕೆ ಮಟನ್ ಕೀಮಾ ತಿನ್ನದೇ ಇರುವವರಿಗೆ ತುಂಬಾನೇ ಸೂಕ್ತವಾಗಿದೆ ನೋಡಿ. ಏನಿದು ಅಂತ ತಿಳಿದುಕೊಳ್ಳಲು ನಿಮಗೆ ತುಂಬಾನೇ ಕುತೂಹಲ ಇರುತ್ತದೆ.
ಹೌದು.. ಈ ರೆಸಿಪಿಯ ಹೆಸರಿನಲ್ಲಿ ಕೀಮಾ ಇದೆ, ಆದರೆ ಅಡುಗೆಯ ಒಳಗೆ ಇದನ್ನು ಎಲ್ಲಿಯೂ ಬಳಸಿರುವುದಿಲ್ಲ. ಬದಲಾಗಿ ಮೊಟ್ಟೆಯನ್ನು ಸಣ್ಣ ಸಣ್ಣ ಕೀಮಾ ಗಾತ್ರದಲ್ಲಿ ತಯಾರಿಸಲಾಗುತ್ತದೆ. ಇದು ಮೊಟ್ಟೆ ತಿನ್ನುವ ಸಸ್ಯಾಹಾರಿಗಳಿಗೆ ಹೇಳಿ ಮಾಡಿಸಿದ ಉತ್ತಮವಾದ ಅಯ್ಕೆಯಾಗಿರುತ್ತದೆ. ಈ ಎಗ್ ಕೀಮಾ ಪುಲಾವ್ ಅನೇಕ ಮಸಾಲೆ ಪದಾರ್ಥಗಳನ್ನು ಒಳಗೊಂಡಿರುತ್ತದೆ ಮತ್ತು ಅಷ್ಟೇ ಅಲ್ಲದೆ ಅನೇಕ ರೀತಿಯ ತರಕಾರಿಗಳನ್ನು ಸಹ ಹೊಂದಿರುತ್ತದೆ ಅಂತ ಹೇಳಬಹುದು. ಇದು ಸೇವಿಸಲು ತುಂಬಾನೇ ಸ್ವಾದಿಷ್ಟಕರವಾಗಿರುತ್ತದೆ ಅಂತ ಹೇಳಬಹುದು. ಇದನ್ನ ಕೇವಲ 40 ನಿಮಿಷಗಳಲ್ಲಿಯೇ ತಯಾರಿಸಿಕೊಳ್ಳಬಹುದು. ಇದಕ್ಕೆ ಬೇಕಾಗಿರುವ ಪದಾರ್ಥಗಳನ್ನು ಜೋಡಿಸಿಕೊಳ್ಳಲು 20 ನಿಮಿಷಗಳು ಬೇಕಾಗುತ್ತವೆ ಮತ್ತು ತಯಾರಿಸಿಕೊಳ್ಳಲು 20 ನಿಮಿಷಗಳು ಬೇಕಾಗುತ್ತವೆ.
ಅಕ್ಕಿ – 1 ಕಪ್
ಈರುಳ್ಳಿ – 1
ಟೊಮೆಟೊ – 1
ಮೊಟ್ಟೆ – 3
ಕರಿಬೇವು – ಸ್ವಲ್ಪ
ಲವಂಗ – 1
ಏಲಕ್ಕಿ – 1/2 ತುಂಡು
ಮೊಸರು – 1/2 ಕಪ್
ಕೆಂಪು ಮೆಣಸಿನ ಪುಡಿ – 1 ಚಮಚ
ಕೊತ್ತಂಬರಿ ಪುಡಿ – 1 ಚಮಚ
ಅರಿಶಿನ ಪುಡಿ – 1/2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
