ಉದಯವಾಹಿನಿ , ಚಿತ್ರದುರ್ಗ: ಪತ್ರಕರ್ತರು ವಾಸ್ತವಗಳನ್ನು ನಿಷ್ಪಕ್ಷಪಾತವಾಗಿ ಸಮಾಜಕ್ಕೆ ತಲುಪಿಸುವುದು ಪತ್ರಿಕಾ ಧರ್ಮದ ಮೂಲ. ಸ್ವಾರ್ಥಗಳನ್ನು ಬಿಟ್ಟು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತೆಗೆದುಕೊಳ್ಳುವುದರಿಂದ ಸಾರ್ವಜನಿಕ ಕಲ್ಯಾಣ ಸಾಧ್ಯ. ಮಾನವೀಯ ಮೌಲ್ಯಗಳನ್ನು ಉಳಿಸಿ, ಪ್ರಜಾಪ್ರಭುತ್ವದ ಕಾವಲುಗಾರನಂತೆ ಕಾರ್ಯನಿರ್ವಹಿಸಬೇಕು. ಎಂದು ಚಿತ್ರದುರ್ಗ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ ಅಭಿಪ್ರಾಯ ಪಟ್ಟರು.
ಇತ್ತೀಚೆಗೆ ನಾಡಿನ ಹೆಸರಾಂತ ಪ್ರಾದೇಶಿಕ ಪತ್ರಿಕೆಯಾದ ಉದಯವಾಹಿನಿ ದಿನಪತ್ರಿಕೆ ವತಿಯಿಂದ ಚಿತ್ರದುರ್ಗ ಜಿಲ್ಲಾ ವರದಿಗಾರ ರವಿ ಕೆ.ಅಂಬೇಕರ್ ಆಯುಷ್ ಕಛೇರಿಗೆ ಭೇಟಿ ನೀಡಿ ಅಧಿಕಾರಿಗೆ ನೂತನ ವರ್ಷದ ಉದಯವಾಹಿನಿ ಕ್ಯಾಲೆಂಡರ್ ನೀಡಿ ಶುಭಕೋರಿದ ಸಂಧರ್ಭದಲ್ಲಿ ಡಾ.ಚಂದ್ರಕಾಂತ್ ನಾಗಸಮುದ್ರ ಮಾತನಾಡುತ್ತಾ ಪೈಪೋಟಿ ಮತ್ತು ಮಾಧ್ಯಮ ಮಾಯಾಲೋಕದಲ್ಲಿ ಸತ್ಯದ ಪರವಾಗಿ ಹೋರಾಡುವುದು ಸವಾಲು. ಪತ್ರಕರ್ತರು ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು. ಇದರಿಂದ ಪತ್ರಿಕಾರಂಗ ಸಂವಿಧಾನದ ನಾಲ್ಕನೇ ಅಂಗವಾಗಿ ಉಳಿಯುತ್ತದೆ ಉದಯವಾಹಿನಿ ದಿನಪತ್ರಿಕೆ ಅಂತಹ ನಿಷ್ಠಾವಂತ ವರದಿಗಳಿಂದ ಹೆಸರು ಮಾಡಿರುವುದು ಅಭಿನಂದನಾರ್ಹ ಎಂದು ಪತ್ರಿಕೆಯ ಸಂಪಾದಕರು ಹಾಗೂ ವರದಿಗಾರರಿಗೆ ಶುಭ ಕೋರಿದರು.
ಇದೇ ಸಂಧರ್ಭದಲ್ಲಿ ಆಯುಷ್ ಇಲಾಖೆಯ ಜೆ ಎನ್ ಕೋಟೆ ಆಯುಷ್ ಆರೋಗ್ಯ ಕ್ಷೇಮ ಮಂದಿರದ ಆಡಳಿತ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮೀ ಪಿ ಹಾಗೂ ಐಮಂಗಳ ವೈದ್ಯಾಧಿಕಾರಿ ಡಾ.ಪ್ರಶಾಂತ್ ಯು.ಎಂ. ಅವರನ್ನು ಉದಯವಾಹಿನಿ ಕ್ಯಾಲೆಂಡರ್ ನೀಡುವ ಮೂಲಕ ಶುಭಕೋರಲಾಯಿತು.
